ಕಾರ್ಕಳದ ಅತ್ತೂರು ದ್ವಾರ ಹಾಗು ಸರ್ವಜ್ಞ ವೃತ್ತ ಬಳಿ ವೈಜ್ಞಾನಿಕ ವೇಗ ತಡೆ ಅಂದರೆ ಹಂಪ್ ಹಾಕಲು ಲೋಕೋಪಯೋಗಿ ಇಲಾಖೆ ಆದೇಶ ನೀಡಿದೆ.
ಸರ್ವಜ್ಞ ವೃತ್ತ ಬಳಿ ನಕ್ರೆಯಿಂದ ಹಾಗು ತಾಲೂಕು ಕಚೇರಿ ಬಳಿಯಿಂದ ಬರುವ ರಸ್ತೆಗಳಿಗೆ ಹಂಪ್ ಹಾಕಲಾಗುತ್ತದೆ.
ಅತ್ತೂರು ದ್ವಾರದ ಬಳಿ ಅತ್ತೂರುನಿಂದ ಬರುವ ರಸ್ತೆಗೆ ಹಾಗು ಕಾಬೆಟ್ಟು ದ್ವಾರದ ಬಳಿ ಹಂಪ್ ಅಳವಡಿಸುವುದಾಗಿ ಇಲಾಖೆ ತಿಳಿಸಿದೆ.
ಈ ವೃತ್ತಗಳಲ್ಲಿ ಸರಣಿ ಅಪಘಾತ ನಡೆಯುತ್ತಿರುವ ಬಗ್ಗೆ ಕಾರ್ಕಳದ ಮಾಧ್ಯಮ ಬಿಂಬ ಪತ್ರಿಕೆ ಹಾಗು ಸ್ವಯಂ ಟೈಮ್ಸ್ ಬಳಗವು ವಿಸ್ತ್ರತ ವರದಿ ಪ್ರಕಟಿಸಿತ್ತು. ವರದಿಯನ್ನು ಕಂಡು ಇಲಾಖೆ ಈ ಪರಿಸ್ಥಿತಿಯ ಗಂಭೀರತೆಯನ್ನು ಮನ ಗಂಡು ಈ ಆದೇಶ ನೀಡಿದೆ.
ಈ ವೃತ್ತ ಮಾತ್ರ ಅಲ್ಲದೆ ಇನ್ನೂ ಕೂಡ ಹಲವಾರು ಕಡೆಗೆ 4 ರಸ್ತೆ ಸೇರುವಲ್ಲಿ ಅಪಘಾತ ಆಗುತ್ತಿದೆ. ಅಲ್ಲಿಯ ಮಾಹಿತಿಯನ್ನು ಕೂಡಾ ಸ್ವಯಂ ಟೈಮ್ಸ್ ಹಾಗು ಮಾಧ್ಯಮ ಬಿಂಬ ಪತ್ರಿಕೆ ಈಗಾಗಲೆ ಪ್ರಕಟ ಮಾಡಿದೆ.

