ಹೆಬ್ರಿ ತಾಲೂಕು ಮಟ್ಟದ ಜನಜಾಗೃತಿ ಪದಾಧಿಕಾರಿಗಳ ಸಭೆ, ಪೋಷಕರ ಮತ್ತು ನವಜನ ಸಮಿತಿಯರ ಸದಸ್ಯರ ಸಭೆಯನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನೀರೆ ಕೃಷ್ಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜನಜಾಗೃತಿಯ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ಮಂಡನೆ ಮಾಡಲಾಯಿತು.
ಜಿಲ್ಲಾ ನಿರ್ದೇಶಕರಾದ ನಾಗರಾಜ್ ಶೆಟ್ಟಿ ಅವರು, ಯೋಜನೆಯ ಕಾರ್ಯಕ್ರಮಗಳಿಗೆ ಪದಾಧಿಕಾರಿಗಳ ಸಹಕಾರ ಅದ್ಭುತ, ನವ ಜೀವನ ಸಮಿತಿಯನ್ನು ಗಟ್ಟಿಗೊಳಿಸುವುದರ ಕುರಿತು ಮಾರ್ಗದರ್ಶನ ನೀಡಿದರು.
ಪ್ರಾದೇಶಿಕ ಕಚೇರಿಯ ಜನಜಾಗೃತಿಯ ಯೋಜನಾಧಿಕಾರಿ ಗಣೇಶ್ ಅವರು ಮುಂದಿನ ಕ್ರಿಯಾ ಯೋಜನೆಗಳ ಕುರಿತು ಮಾರ್ಗದರ್ಶನ ನೀಡಿದರು. ವಲಯವರು ಜನಜಾಗೃತಿ ಪದಾಧಿಕಾರಿಗಳ ವಿವರವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ೬ ವಲಯದ ಜನಜಾಗ್ರತಿ ವಲಯ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಜನ ಜಾಗೃತಿ ಪದಾಧಿಕಾರಿಗಳು, ನವಜೀವನ ಸಮಿತಿಯ ಅಧ್ಯಕ್ಷರು, ನವ ಜೀವನ ಸಮಿತಿಯ ಪೋಷಕರು, ಜ್ಞಾನವಿಕಾಸ ಸಮಾನಾಧಿಕಾರಿ, ಕೃಷಿ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಯೋಜನಾಧಿಕಾರಿ ಸ್ವಾಗತಿಸಿದರು. ಒಂದು ವರ್ಷ ಸಾಧನ ವಿವರವನ್ನು ತಾಲೂಕಿನ ಯೋಜನಾಧಿಕಾರಿಗಳು ಮಂಡಿಸಿದರು.