ಹೆಬ್ರಿ: ಕುಚ್ಚೂರು ಶಾಲೆಯ ಬಳಿ ಸ್ಕೂಟಿಗೆ ಬೈಕ್ ಡಿಕ್ಕಿಯಾದ ಘಟನೆ ಮಾ. 4 ರಂದು ನಡೆದಿದೆ.
ಹೆಬ್ರಿ ಅಲ್ಬಾಡಿ ಗ್ರಾಮದ ನಿವಾಸಿಯಾದ ರವೀಂದ್ರ (66)ರವರು ಸ್ಕೂಟಿಯಲ್ಲಿ ಸಹಸವಾರಳಾಗಿ ತನ್ನ ಅತ್ತಿಗೆಯವರನ್ನು ಕೂರಿಸಿಕೊಂಡು ಹೆಬ್ರಿಯಿಂದ ಆರ್ಡಿ ಕಡೆಗೆ ಹೊಗುತ್ತಿ ರುವಾಗ ಕುಚ್ಚೂರು ಶಾಲೆ ಎದುರು ತನ್ನ ಮುಂದಿನಿಂದ ಹೋಗುತ್ತಿದ್ದ ಮೋಟಾರ್ ಸವಾರ ಒಮ್ಮೇಲೆ ಯಾವುದೇ ಸೂಚನೆ ನೀಡದೆ ಬಲಕ್ಕೆ ತಿರುಗಿಸಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಜಯಂತಿಯವರ ಗಲ್ಲಕ್ಕೆ ಹಾಗೂ ಎಡ ಕೈ ಮೊಣ ಗಂಟಿಗೆ ರಕ್ತ ಗಾಯವಾಗಿದ್ದು ಅಲ್ಲದೆ ಎಡ ಕೈಯ ಭುಜದ ಬಳಿ ಮೂಳೆ ಮುರಿತವಾಗಿರುತ್ತದೆ.
ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ