ಕಾರ್ಕಳ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ 2 ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡ ಘಟನೆ ಮಾ. 9ರಂದು ನಡೆದಿದೆ.
ಪುಲ್ಕೇರಿ ಬೈಪಾಸ್ ಕಡೆಯಿಂದ 2 ಟಿಪ್ಪರ್ ಲಾರಿಗಳು ಅಕ್ರಮ ಮರಳನ್ನು ತುಂಬಿಸಿಕೊಂಡು ಬರುತ್ತಿದ್ದು ಸರ್ವಜ್ಞ ಸರ್ಕಲ್ ಬಳಿ ಕಾರ್ಕಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ (ತನಿಖೆ) ಶಿವಕುಮಾರ್ ಎಸ್ ಆರ್ ಇವರು ಸರ್ವಜ್ಞ ಸರ್ಕಲ್ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಲಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ, ಟಿಪ್ಪರ ಲಾರಿಗಳನ್ನು ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ ಅದರ ಚಾಲಕರು ಟಿಪ್ಪರ ಲಾರಿಯಿಂದ ಇಳಿದು ಓಡಿ ಹೋಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.