ಕಬ್ಬಿನಾಲೆ ಗೋಪಾಲಕೃಷ್ಣ ದೇವಸ್ಥಾನ : ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಆಯ್ಕೆ.
ಕಬ್ಬಿನಾಲೆ : ಕಬ್ಬಿನಾಲೆ ಕೆಳಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ರಾಘವೇಂದ್ರ ಭಟ್ ಅವರನ್ನು ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಹಿಂದಿನ ಅವಧಿಯಲ್ಲೂ ರಾಘವೇಂದ್ರ ಭಟ್ ಅಧ್ಯಕ್ಷರಾಗಿದ್ದರು. ಸಮಿತಿಯ ಸದಸ್ಯರಾಗಿ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಕೆ. ನಾರಾಯಣ ಭಟ್, ಶೇಖರ ಗೌಡ, ಗಾಯತ್ರಿ, ರೇಣುಕಾ, ಸದಾಶಿವ ಶೆಟ್ಟಿ, ಯೋಗೇಂದ್ರ ಹೆಬ್ಬಾರ್, ಜಗದೀಶ್ ಅವರನ್ನು ಆಯ್ಕೆ ಮಾಡಲಾಗಿದೆ.