ಕಾರ್ಕಳ

ಎಂ.ಆರ್. ಪಿ.ಎಲ್ ಸಂಸ್ಥೆಯ ವತಿಯಿಂದ ವಿದ್ಯಾ ಭಾರತಿ ಸಂಯೋಜಿತ ಶ್ರೀರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ವಿದ್ಯಾಭಾರತಿ ಸಂಯೋಜಿತ ಶ್ರೀ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಇದರ ಅಮೃತ ಮಹೋತ್ಸವದ ನೂತನ ಶಾಲಾ ಕಟ್ಟಡಕ್ಕೆ ಎಂ.ಆರ್. ಪಿ .ಎಲ್ ಸಂಸ್ಥೆಯ ಸಿ.ಎಸ್.ಆರ್ ಅನುದಾನದಿಂದ 42 ಲಕ್ಷ ರೂಪಾಯಿ ಅನುದಾನ ನೀಡಿ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯ್ಯಾರ್ ಇವರು ಶಿಲಾನ್ಯಾಸವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರು ಡಾ.ವೇದಾವತಿ ಆರ್ ಕಲ್ಯಾ , ಹಳೆವಿದ್ಯಾರ್ಥಿ ಶಾಸಕರಾದ ವಿ.ಸುನಿಲ್ ಕುಮಾರ್, ಆಡಳಿತ ಮಂಡಳಿ ಸದಸ್ಯ ಶರತ್ ಕುಮಾರ್ ಕಲ್ಯಾ, ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ಉದ್ಯಮಿ ಅರುಣ್ ಪುರಾಣಿಕ್, ಚಂದ್ರಶೇಖರ್ ಹೆಗ್ಡೆ, ಪ್ರಕಾಶ್ ಪುತ್ರನ್, ಪುರಸಭಾ ಸದಸ್ಯೆ ಮೀನಾಕ್ಷಿ ಗಂಗಾಧರ್, ಟ್ರಸ್ಟ್ ನ ಅಧ್ಯಕ್ಷ ಶ್ರೀಧರ್ ಸುವರ್ಣ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಜ್ಞಾನೇಶ್ ಕಾಮತ್, ಕ್ಯಾಪ್ಟನ್ ರಮೇಶ್ ಕಾರ್ಣಿಕ್,ಎರ್ ಮಾರ್ಷಲ್ ಗಿಲ್ಬರ್ಟ್ ಬ್ರಿಗೇಂಜ,ಉದ್ಯಮಿ ಬೋಳ ಗಿರೀಶ್ ಹೆಗ್ಡೆ,ಕಾರ್ಯದರ್ಶಿ ಹರೀಶ್ ಅಂಚನ್,ಸಂತೋಷ್ ಹೆಗ್ಡೆ, ಶಾಲಾ ಮುಖ್ಯೋಪಾಧ್ಯಾಯರಾದ ಹರೀಶ್ ಕುಮಾರ್ ಶೆಟ್ಟಿ, ಶಾಲಾ ಅಧ್ಯಾಪಕ ವೃಂದ, ಹಳೆ ವಿದ್ಯಾರ್ಥಿಗಳು, ನಿವೃತ್ತ ಅಧ್ಯಾಪಕರು, ಅಮೃತ ಮಹೋತ್ಸವ ಸಮಿತಿಯ ಸದಸ್ಯರು, ಶಾಲಾಭಿಮಾನಿಗಳು ಉಪಸ್ಥಿತರಿದ್ದರು.


ಧಾರ್ಮಿಕ ವಿಧಿ ವಿಧಾನಗಳನ್ನು ಅರ್ಚಕರಾದ ಸದಾನಂದ ಶಾಂತಿ ನೆರವೇರಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಕಾಶ್ ರಾವ್ ಸ್ವಾಗತಿಸಿ ವಂದಿಸಿದರು.

Related posts

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ಮಂಜೂರಾತಿ ರಶೀದಿ ವಿತರಣೆ

Madhyama Bimba

ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚ್ಚಿನ್ ವೈ ಇವರನ್ನು ಸೇವೆಯಿಂದ ವಜಾ ಮಾಡುವಂತೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ ಕಾರ್ಕಳ ಕಾಂಗ್ರೆಸ್ ನಿಯೋಗ

Madhyama Bimba

ಸಂತ ಲಾರೆನ್ಸ್ ಬಸಿಲಿಕ ಅತ್ತೂರು: ವಾರ್ಷಿಕ ಮಹೋತ್ಸವಕ್ಕೆ ಚಾಲನೆ ಹಾಗೂ ಸಂತ ಸಾಬೆಸ್ಟಿಯನ್ ನರ ಹಬ್ಬದ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More