ಕಾರ್ಕಳ

ವಲಯ ಮಟ್ಟದ ಕ್ರೀಡಾಕೂಟ: ರೋಟರಿ ಕ್ಲಬ್ ಕಾರ್ಕಳ ಚಾಂಪಿಯನ್

ಕಾರ್ಕಳ: ರೋಟರಿ ಇಂಟರ್ ನ್ಯಾಷನಲ್ ಜೋನ್-5 ವತಿಯಿಂದ ನಡೆದ ವಲಯ ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ, ರೋಟರಿ ಕ್ಲಬ್ ಕಾರ್ಕಳದ ಸದಸ್ಯರು ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದ್ದಾರೆ.


ಕ್ಲಬ್‌ನ ಮಹಿಳಾ ಹಾಗೂ ಪುರುಷ ಸದಸ್ಯರು ಅಥ್ಲೆಟಿಕ್ಸ್, ವಾಲಿಬಾಲ್, ತ್ರೋಬಾಲ್, ಬ್ಯಾಡಿಂಟನ್, ಹಗ್ಗ ಜಗ್ಗಾಟ, ಕ್ರಿಕೆಟ್, ಶಾಟ್‌ಪುಟ್, ರನ್ನಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಭಾಗವಹಿಸಿ   ಪದಕಗಳನ್ನು ಪಡೆದುಕೊಂಡಿದ್ದಾರೆ.
ಸಮಗ್ರ ಅಂಕದಲ್ಲಿ ಅಗ್ರಸ್ಥಾನ ಪಡೆದ ಕಾರ್ಕಳ ಕ್ಲಬ್, ಈ ಬಾರಿ ಜೋನ್ ಮಟ್ಟದಲ್ಲಿ ಅತ್ಯುತ್ತಮ ತಂಡವಾಗಿಯೂ ಹೆಸರು ಮಾಡಿತು.

ಕಾರ್ಯಕ್ರಮದಲ್ಲಿ ಜೋನ್ ಅಧಿಕಾರಿಗಳು, ಕ್ಲಬ್ ಸದಸ್ಯರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.

ಕ್ಲಬ್ ಅಧ್ಯಕ್ಷರಾದ ಕೆ ನವೀನ್ ಚಂದ್ರ ಶೆಟ್ಟಿ ಮಾತನಾಡಿ, “ಈ ಜಯ ರೋಟರಿ ಸ್ಫೂರ್ತಿ, ಒಗ್ಗಟ್ಟು, ಶಿಸ್ತಿನ ಪ್ರತಿರೂಪ. ಸದಸ್ಯರ ತಯಾರಿ, ಕ್ರೀಡಾಸ್ಫೂರ್ತಿ ಹಾಗೂ ತಂಡಾತ್ಮಕತೆ ನಮ್ಮ ಕ್ಲಬ್‌ಗೆ ಈ ಗೌರವ ತಂದುಕೊಟ್ಟಿವೆ” ಎಂದು ತಿಳಿಸಿದರು.

ಕ್ಲಬ್ ಕಾರ್ಯದರ್ಶಿ ಚೇತನ್ ನಾಯಕ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ಜಿಲ್ಲಾ ವಿಭಾಗಗಳಲ್ಲಿ ಭಾಗವಹಿಸಿ ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ಪಡೆಯುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

Related posts

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್‌ನ ರಾಜ್ಯ ಉಪಾಧ್ಯಕ್ಷರಾಗಿ ಬೈಲೂರು ಕನಿಷ್ಕ್ ಹೆಗ್ಡೆ

Madhyama Bimba

ಮುದ್ರಾಡಿಯ ಶಶಿಕಲಾ ಡಿ.ಪೂಜಾರಿ ಅವರಿಗೆ ಸೇವಾ ರತ್ನ ಪ್ರಶಸ್ತಿ

Madhyama Bimba

2024-25 ನೇ ಸಾಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾಧ್ಯಮ ಮಾನ್ಯತೆ ಹೊಂದಿದ ಪತ್ರಕರ್ತರಿಗೆ ಮೀಡಿಯಾ ಕಿಟ್: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More