ರೋಟರಿ ಕ್ಲಬ್ ಕಾರ್ಕಳ ಹಾಗೂ ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ಅರುಣೋದಯ ಸ್ಪೆಷಲ್ ಸ್ಕೂಲ್ ಕಾರ್ಕಳದಲ್ಲಿ “ದೇವರ ಮಕ್ಕಳೊಂದಿಗೆ ನಮ್ಮ ಸಮಯ” ಎಂಬ ವಿಶೇಷ ಸೇವಾ ಕಾರ್ಯಕ್ರಮ ಡಿ. ೦೪ರಂದು ಜರಗಿತು.

ಕಾರ್ಯಕ್ರಮದ ಮುಖ್ಯ ಅತಿಥಿ ರೋ| ರೇಖಾ ಉಪಾಧ್ಯಾಯ ಅವರು ಮಕ್ಕಳಿಗೆ ಪ್ರೋತ್ಸಾಹದ ಸಂದೇಶ ನೀಡಿ, ಸಮಾಜದಲ್ಲಿ ವಿಶೇಷ ಮಕ್ಕಳ ಅಭಿವೃದ್ದಿಗೆ ಅಗತ್ಯವಿರುವ ಸಂವೇದನೆ ಮತ್ತು ಸಹಕಾರದ ಮಹತ್ವವನ್ನು ವಿವರಿಸಿದರು.

ಆನ್ಸ್ ಅಧ್ಯಕ್ಷೆ ಜಯಂತಿ ಆನಂದ್ ನಾಯಕ್ ರವರು ಮಕ್ಕಳ ಬಗ್ಗೆ ಪ್ರೋತ್ಸಾಹದ ಮಾತುಗಳನ್ನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.

ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷರಾದ ಕೆ. ನವೀನ್ ಚಂದ್ರ ಶೆಟ್ಟಿ ಅವರು ಮಕ್ಕಳೊಂದಿಗೆ ಸಂವಾದಿಸಿ, ಅವರ ಪ್ರತಿಭೆಯನ್ನು ಶ್ಲಾಘಿಸಿ, ಪ್ರೋತ್ಸಾಹದ ಮಾತು ಹೇಳಿದರು.
ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಮಕ್ಕಳಿಗೆ ಹಾಗೂ ಶಾಲೆಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ದೇಶಭಕ್ತಿ ಗೀತೆಗೆ ನೃತ್ಯ ಮಾಡುವುದರ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದರು.

ಸಮಾರಂಭದಲ್ಲಿ ರೋಟರಿ ಸದಸ್ಯರು, ರೋಟರಿ ಆನ್ಸ್ ಸದಸ್ಯೆರು, ಶಿಕ್ಷಕರು ಶಾಲಾ ಸಿಬ್ಬಂದಿ, ಶಾಲಾ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಆನ್. ಜ್ಯೋತಿ ಚೇತನ್ ಮುಖ್ಯ ಅತಿಥಿಯ ಪರಿಚಯಗೈದರು. ಪ್ರಿಸಿಲ್ಲಾ ಪೆರೇರಾ ಸ್ವಾಗತಿಸಿದರು. ಶಾಲೆಯ ಶಿಕ್ಷಕಿ ಶ್ರೀಮತಿ ಕಾಂತಮ್ಮ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ಹನುಮಂತಪ್ಪ ಧನ್ಯವಾದ ಸಲ್ಲಿಸಿದರು.
