ಮೂಡುಬಿದಿರೆ

ಎಕ್ಸಲೆಂಟ್ ಸ್ಕೂಲ್(ಸಿಬಿಎಸ್ಇ) ವಾರ್ಷಿಕೋತ್ಸವ

ಎಕ್ಸಲೆಂಟ್ ಶಾಲೆಯಲ್ಲಿ 2025- 26 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ಬಹಳ ವೈಭವದಿಂದ ಆಚರಿಸಲಾಯಿತು.


ಎಕ್ಸಲೆಂಟ್ ಶಾಲೆ ಹೆಸರಿಗೆ ತಕ್ಕಂತೆ ಎಕ್ಸಲೆಂಟ್ ಆಗಿ ಕ್ರಮಬದ್ಧರೀತಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸ್ಥೆಯನ್ನು ಪ್ರಶಂಸಿ ಜೊತೆಗೆ ಸಿ ಬಿ ಎಸ್ ಇ ಪಠ್ಯಕ್ರಮ ಬದಲಾವಣೆಯಲ್ಲಿ ಶಿಕ್ಷಕರ ಭೋದನ ಶೈಲಿಯು ಬದಲಾಗುತ್ತಿದೆ, ಇದರ ಸಂಪೂರ್ಣ ಸದುಪಯೋಗ ಪಡೆದು ಪೋಷಕರು ಹೆಮ್ಮೆ ಪಡುವ ರೀತಿಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭುವನ ಜ್ಯೋತಿ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷ ಪ್ರಶಾಂತ್ ಡಿಸೋಜರವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ರವರು ವಹಿಸಿ ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳು ಸಾಧನೆ ಮಾಡುವಂತೆ ಸಲಹೆಯಿತ್ತರು.


ಅಂಕಗಳು ಮುಖ್ಯವಲ್ಲ, ಉತ್ತಮ ಸಂಸ್ಕಾರವು ಜೀವನದ ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಮೈಸೂರು ಎಸ್ ಎಲ್ ವಿ ಬುಕ್ ಏಜೆನ್ಸಿ ವ್ಯವಸ್ಥಾಪಕನಿರ್ದೇಶಕರಾದ ದಿವಾಕರ ದಾಸ್ ರವರು ತಿಳಿಸಿದರು.

ಒತ್ತಡದಾಯಕ ಕಲಿಕೆಗಿಂತ ಆನಂದದಾಯಕ ಕಲಿಕೆಯು ಉತ್ತಮ ಸಾಧನೆ ಮಾಡಲು ಪೂರಕವಾಗುತ್ತದೆ ಎಂದು ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಹಳೆಯ ವಿದ್ಯಾರ್ಥಿ ಶಿಶಿರ್ ಎಚ್ ಶೆಟ್ಟಿಯವರು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ರವರು ಪೋಷಕರ ಬೆಂಬಲದಿಂದ ಎಕ್ಸಲೆಂಟ್ ಸಂಸ್ಥೆ ಅಭಿವೃದ್ಧಿ ಪಥದತ್ತ ಸಾಗಲು ಸಹಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.ಸ್ವಯಂ ನಂಬಿಕೆ ಬದುಕಿಗೆ ಅತ್ಯಗತ್ಯ. ಮಿತಿಯನ್ನು ಗಮನಿಸದೆ ಸಾಧ್ಯತೆಯ ಕಡೆಗೆ ಗಮನಹರಿಸಬೇಕೆಂದರು.

ಸಿಬಿಎಸ್ಇ ಪ್ರಾಂಶುಪಾಲ ಶ್ರೀಪ್ರಸಾದ್ ವಾರ್ಷಿಕ ವರದಿಯನ್ನು ಮಂಡಿಸಿದರು.

ಇದೇ ಸಂದರ್ಭದಲ್ಲಿ ಪ್ರಶಾಂತ್ ಡಿಸೋಜಾ, ದಿವಾಕರ್ ದಾಸ್, ಎಂ. ಗಣೇಶ್ ಕಾಮತ್ ಮತ್ತು ಕೆಸೆಟ್, ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಶೇಕಡಾ 99.96, ಜೆ ಇ ಇ ಅಡ್ವಾಸ್ಡ್ , ಕಾಮಿಡಿಕೆ ಪರೀಕ್ಷೆಯಲ್ಲಿ ಮೊದಲ ರಾಂಕ್ ಗಳಿಸಿ ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟ ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಹಳೆಯ ವಿದ್ಯಾರ್ಥಿ ಶಿಶಿರ್ ಎಚ್ ಶೆಟ್ಟಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. 2024 – 25ನೇ ಸಿಬಿಎಸ್ಇ ಬೋರ್ಡ್ ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಅತ್ಯಧಿಕ ಅಂಕಗಳಿಸಿದ ರುಚಿರ ಕುಂದರ್ ಮತ್ತು ಆಂತಿಯ ಶೈನಾ ಮಿರಾಂಡ ರವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಕಾರ್ಯಕ್ರಮಕ್ಕೆ ಪೋಷಕರು ಆಗಮಿಸಿ ಕಾರ್ಯಕ್ರಮದ ಮೇರುಗನ್ನು ಇಮ್ಮಡಿಗೊಳಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕ ಡಾ. ಬಿ. ಪಿ ಸಂಪತ್ ಕುಮಾರ್, ಸಿಬಿಎಸ್ಇ ಪ್ರಾಂಶುಪಾಲ ಶ್ರೀಪ್ರಸಾದ್, ಹಳೆ ವಿದ್ಯಾರ್ಥಿ ಶಿಶಿರ್, ಶಾಲಾ ನಾಯಕ ಶ್ರೀಕರ್ ಮತ್ತು ನಾಯಕಿ ನಿರೀಕ್ಷ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಹರ್ಷಿತ ಜಿ. ಬಂಗೇರ ನಿರೂಪಿಸಿ, ಸಿ ಬಿ ಎಸ್ ಸಿ ಸಂಯೋಜಕಿ ಶ್ರೀಮತಿ ವಿಮಲ ಸ್ವಾಗತಿಸಿ, ವಿದ್ಯಾರ್ಥಿನಿ ನಿರೀಕ್ಷಾ ವಂದಿಸಿದರು.

Related posts

 ಚೇತನ ಯುವಕ ಮಂಡಲದ ವಾರ್ಷಿಕೋತ್ಸವ- ಮಾರ್ನಾಡಿನ ಸೇವಾ ಮಾಣಿಕ್ಯ ರಾಘು ಸಿ ಪೂಜಾರಿಯವರಿಗೆ ಹುಟ್ಟೂರ ಗೌರವ

Madhyama Bimba

ಡಿಕೆ ಶಿವಕುಮಾರ್ ಹುಟ್ಟು ಹಬ್ಬ ಸಂಭ್ರಮಿಸಿದ ಮೂಡುಬಿದಿರೆ ಕಾಂಗ್ರೆಸ್ಸಿಗರು

Madhyama Bimba

ಎನ್‌ಡಿಎ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನಿಂದ ಗಮನಾರ್ಹ ಸಾಧನೆ : 24 ವಿದ್ಯಾರ್ಥಿಗಳು ಉತ್ತೀರ್ಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More