Blog

ಸಹಕಾರ ನೀಡಿದ ಪರಸ್ಪರ ಸೇವಾ ಟ್ರಸ್ಟ್

ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ
ಪರಸ್ಪರ ಸೇವಾ ಟ್ರಸ್ಟ್ (ರಿ)
ಈದು -ನಾರಾವಿ ವತಿಯಿಂದ
*ಒಂದು ಲಕ್ಷ ರೂಪಾಯಿ ಸಹಾಯ ಧನ*

ಪರಸ್ಪರ ಸೇವಾ ಟ್ರಸ್ಟ್ (ರಿ)ಈದು -ನಾರಾವಿ ವತಿಯಿಂದ
ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ಆಚಾರ್ಯ ಇವರು ಒಂದು ತಿಂಗಳ ಹಿಂದೆ ವೆಡ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮನೆಯ ಮಾಡಿನಿಂದ ಕೆಳಗೆ ಬಿದ್ದು ಸೊಂಟ ಕಾಲು ಗಳಿಗೆ ಗಂಭೀರ ಗಾಯವಾಗಿ ಮಂಗಳೂರಿನ ಎ.ಜೆ ಹಾಸ್ಪಿಟಲ್ ನಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದು ಕೆಲವು ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸಂತೋಷ್ ಆಚಾರ್ಯ ಅವರು ಕಡು ಬಡತನದಿಂದ ವಯಸ್ಸಾದ ತಂದೆ ತಾಯಿ ತನ್ನ  ಎರಡು ವರ್ಷದ ಮಗು ಮತ್ತು ತನ್ನ ಹೆಂಡತಿಯೊಂದಿಗೆ  ಜೀವನ ಸಾಗಿಸುತ್ತಿದ್ದು ಮನೆಗೆ ಆದರ ಸ್ತಂಭವಾಗಿದ್ದ ಸಂತೋಷ್ ಈ ಆಕಸ್ಮಿಕ ಅವಘಡದಿಂದ ಮನೆಯಲ್ಲಿ ಕೂರುವ ಹಾಗೆ ಆಗಿದೆ.
ಈ ಕಷ್ಟದ ಸಮಯವನ್ನು ತಿಳಿದ ಪರಸ್ಪರ ಸೇವಾ ಟ್ರಸ್ಟ್ ನ ಕಾರ್ಯಕರ್ತರು ಊರಿನವರ ಸಹಕಾರದಿಂದ ಒಂದು ಲಕ್ಷದ ಸಹಾಯಧನವನ್ನು ನೀಡಿದ್ದಾರೆ

Related posts

ಕಡ್ತಲದ ಶತಾಯುಷಿ ಶ್ರೀಮತಿ ಕಮಲ ನಿಧನ

Madhyama Bimba

ಜಾರ್ಕಳ ಮುಂಡ್ಲಿಯಲ್ಲಿ ಎನ್ ಎಸ್ ಎಸ್ ಶಿಬಿರ

Madhyama Bimba

ಸಿಇಟಿ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ಅದ್ಭುತ ಸಾಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More