ಹೆಬ್ರಿ

ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಪರೀಕ್ಷಿತ್ ಮಂದಾರ ಆಚಾರ್ ರಾಜ್ಯಮಟ್ಟಕ್ಕೆ ಆಯ್ಕೆ

ಹೆಬ್ರಿ : ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ವತಿಯಿಂದ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮತ್ತು ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಸಹಕಾರದಲ್ಲಿ ಡಿ. ೯ರಂದು ನಡೆದ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು2025-26 ರಲ್ಲಿ ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಪರೀಕ್ಷಿತ್ ಮಂದಾರ ಆಚಾರ್ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಪರೀಕ್ಷಿತ್ ಈಗಾಗಲೇ ಹಲವಾರು ಪ್ರಶಸ್ತಿಯನ್ನು ಗಳಿಸಿದ್ದಾರೆ. ಪರೀಕ್ಷಿತ್ ಕೊಕ್ಕರ್ಣೆ ಸಮೀಪದ ಮಾರಾಳಿಯ ಮಂದಾರ ಆಚಾರ್ ವೀಣಾ ಆಚಾರ್ ಸುಪುತ್ರ.


ಪ್ರಧಾನ ಮಂತ್ರಿ ತಾಯಿಯೊಂದಿಗೆ ಇರುವ ಚಿತ್ರ ಬಿಡಿಸಿ ಮೆಚ್ಚುಗೆ ಪಡೆದ ಪರೀಕ್ಷಿತ್ ಆಚಾರ್ ಉಡುಪಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸಿದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ತಾಯಿಯೊಂದಿಗೆ ಇರುವ ಚಿತ್ರವನ್ನು ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.


ಪತ್ರಿಕಾ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಆ ಚಿತ್ರವನ್ನು ಪ್ರಕಟಿಸಿ ಪ್ರೋತ್ಸಾಹಿಸಿದರು. ನರೇಂದ್ರ ಮೋದಿಯವರು ಉಡುಪಿಗೆ ಬಂದ ಸಂದರ್ಭದಲ್ಲಿ ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಪರೀಕ್ಷಿತ್ ಮಂದಾರ ಆಚಾರ್ ಅವರು ಬಿಡಿಸಿದ ಚಿತ್ರ ಎಲ್ಲೆಡೆಯೂ ರಾರಾಜಿಸಿತು.

Related posts

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಪಡೀಲ್ ಮಂಗಳೂರು ಶಾಖೆ ದ. ಕ. ಜಿಲ್ಲಾಧಿಕಾರಿ ಕಾರ್ಯಾಲಯ ಪ್ರಜಾಸೌಧಕ್ಕೆ ಸ್ಥಳಾಂತರ

Madhyama Bimba

ವರಂಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ

Madhyama Bimba

ಕಡ್ತಲದಲ್ಲಿ ರಸ್ತೆ ಬದಿ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More