ಕಾರ್ಕಳ

ಕಾರ್ಕಳ: ಕುಕ್ಕುಂದೂರು ಬಳಿ ಪಾದಚಾರಿಗೆ ಕಾರು ಡಿಕ್ಕಿ- ಪಾದಚಾರಿ ಮೃತ್ಯು

ಕಾರ್ಕಳ: ಕುಕ್ಕುಂದೂರು ಗ್ರಾಮದ ಗ್ರೀನ್‌ಲ್ಯಾಂಡ್ ಫ್ಯಾಕ್ಟರಿಯ ಬಳಿ ಪಾದಚಾರಿಗೆ ಕಾರು ಡಿಕ್ಕಿಯಾಗಿ ಪಾದಚಾರಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕರೆ ತರುವ ದಾರಿ ಮಧ್ಯೆ ಮೃತಪಟ್ಟ ಘಟನೆ ಡಿ. 10ರಂದು ವರದಿಯಾಗಿದೆ.


ದಿನಕರ ಪೂಜಾರಿ (50) ಮೃತಪಟ್ಟವರು.


ದಿನಕರ ಪೂಜಾರಿಯವರು ಅಯ್ಯಪ್ಪನಗರ ಕಡೆಯಿಂದ ಜಾರ್ಕಳ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ನಾಗೇಶ್ ಪೈ ಇನ್ನೋವಾ ಕಾರನ್ನು ಅತೀವೇಗ ಹಾಗೂ ನಿಲರ್ಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಿನಕರ ಪೂಜಾರಿಯವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ.


ಡಿಕ್ಕಿಯ ರಭಸಕ್ಕೆ ದಿನಕರ ಪೂಜಾರಿಯವರು ಡಾಮಾರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತರುವ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಕಾರ್ಕಳದ 35 ಕಡೆಗಳಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

Madhyama Bimba

ಅಜೆಕಾರು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ,

Madhyama Bimba

ಹೆಬ್ರಿ: ಚೈತನ್ಯ ಯುವ ವೃಂದ ವತಿಯಿಂದ ಕ್ರಿಕೆಟ್ ಪಂದ್ಯಾಟ ಚೈತನ್ಯ ಟ್ರೋಫಿ-2026

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More