ಕಾರ್ಕಳಹೆಬ್ರಿ

ಕಣಂಜಾರು ಭಾಗದಲ್ಲಿ ಸ್ಥಗಿತಗೊಂಡಿದ್ದ ಸರಕಾರಿ ಬಸ್ ಮತ್ತೆ ಪುನರಾರಂಭ – ಅಧ್ಯಕ್ಷ ಸಚ್ಚಿದಾನಂದ ಪ್ರಭುರವರ ಶ್ರಮಕ್ಕೆ ಸಿಕ್ಕ ಫಲ

ಬೈಲೂರು: ಉಡುಪಿ-ಪಳ್ಳಿ-ಕಣಂಜಾರು-ಕಾರ್ಕಳ ಮಾರ್ಗವಾಗಿ ಸಂಚರಿಸುತ್ತಿದ್ದ ಸರಕಾರಿ ಬಸ್ಸು ಗ್ರಾಮಸ್ಥರ ಆಗ್ರಹ ಹಾಗೂ ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭುರವರ ಸತತ ಪ್ರಯತ್ನದಿಂದ ಡಿ.10ರಿಂದ ಮತ್ತೆ ಸಂಚಾರ ಪ್ರಾರಂಭಿಸಿದೆ. ಕಳೆದ 2024ರ ಡಿಸೆಂಬರ್ ತಿಂಗಳಲ್ಲಿ ಶಕ್ತಿ ಯೋಜನೆಯಡಿ ಈ ಮಾರ್ಗ ಮೂಲಕ ಸಂಚಾರ ಆರಂಭಿಸಿದ ಬಸ್ಸು ಮಾರ್ಚ್ 2025ರ ವೇಳೆಗೆ ಸಂಚಾರ ಸ್ಥಗಿತಗೊಳಿಸಿತ್ತು. ಇದರಿಂದ ಈ ಪ್ರದೇಶದ ಶಾಲಾ ವಿದ್ಯಾರ್ಥಿಗಳು ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರು ಸಮಸ್ಯೆಯನ್ನು ಅನುಭವಿಸುತ್ತಿದ್ದರು.


ನೀರೆ ಗ್ರಾ.ಪಂ. ಅಧ್ಯಕ್ಷರಾದ ಸಚ್ಚಿದಾನಂದ ಪ್ರಭುರವರೊಂದಿಗೆ ಸ್ಥಳೀಯರು, ವಿದ್ಯಾರ್ಥಿಗಳು, ಜಿಲ್ಲಾಧಿಕಾರಿ ಹಾಗೂ ಆರ್‌ಟಿಓ ಅಧಿಕಾರಿಗಳ ಮೇಲೆ ನಿರಂತರ ಒತ್ತಡ ತಂದು ಮತ್ತೆ ಬಸ್ಸು ಸಂಚಾರವನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೋಳ ಪ್ರಾಪ್ತಿ ಎಸ್. ಪೂಜಾರಿಗೆ ಗ್ರ್ಯಾಂಡ್ ಚಾಂಪಿಯನ್ ಶಿಪ್ ಪ್ರಶಸ್ತಿ

Madhyama Bimba

ಪಡುಕುಡೂರಿನಿಂದ ಸಿರಿಬೈಲು ದೇವಸ್ಥಾನಕ್ಕೆ ಪಾದಯಾತ್ರೆ

Madhyama Bimba

ಬೈಲೂರು: ಎಸ್‌ಎಸ್‌ಎಲ್‌ಸಿಯಲ್ಲಿ ಲಿಸಾ ಬರ್ಬೋಜಾ ಅದ್ಭುತ ಸಾಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More