ಬೈಲೂರು: ಲಯನ್ಸ್ ಕ್ಲಬ್ ನೀರೆ ಬೈಲೂರು ಇಲ್ಲಿಗೆ ಜಿಲ್ಲಾ ಗವರ್ನರ್ ಸಪ್ನ ಸುರೇಶ್ ಇವರ ಅಧಿಕೃತ ಭೇಟಿ ಕಾರ್ಯಕ್ರಮವು ಡಿ. ೧೩ರಂದು ಬೈಲೂರು ಅರ್ಚನ ಹಾಲ್‌ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ಶೆಟ್ಟಿ ವಹಿಸಿ ಮಾತನಾಡಿ ಕ್ಲಬ್‌ನ ವತಿಯಿಂದ ಬೈಲೂರು ಪರಿಸರ ವ್ಯಾಪ್ತಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ. ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡುವ ಯೋಜನೆ ಅಳವಡಿಸಿಕೊಳ್ಳಲಾಗಿದೆ ಇದಕ್ಕೆಲ್ಲ ಸರ್ವರು ಸಹಕರಿಸುವಂತೆ ವಿನಂತಿಸಿದರು.
ಜಿಲ್ಲಾ ಗವರ್ನರ್ ಸಪ್ನ ಸುರೇಶ್ ಮಾತನಾಡಿ ಬೈಲೂರು ಲಯನ್ಸ್ ಕ್ಲಬ್‌ನ ಸೇವಾ ಚಟುವಟಿಕೆಗಳು ಇತರರಿಗೆ ಮಾದರಿಯೆನಿಸಿದೆ. ಬೈಲೂರು ಗ್ರಾ. ಪಂ ವ್ಯಾಪ್ತಿಯ ಪರಶುರಾಮ ಥೀಮ್ ಪಾರ್ಕಿನ ಬಳಿಯ ದುರಸ್ತಿಯಲ್ಲಿದ್ದ ಬಸ್ಸು ತಂಗುದಾಣದ ನವೀಕರಣಗೊಳಿಸಿ ಶಾಶ್ವತ ಸೇವಾ ಕಾರ್ಯ ಮಾಡಿರುವುದು ಶ್ಲಾಘನೀಯವೆಂದರು. ಹಲಸಿನ ಮರಗಳನ್ನು ನೆಟ್ಟು ಲಯನ್ಸ್ ವನ ನಿರ್ಮಣ, ಬೀದಿ ಬದಿ ವ್ಯಾಪರಸ್ಥರಿಗೆ ಲಯನ್ಸ್ ಛತ್ರಿ ವಿತರಣೆ, ನಮ್ಮ ನಿಸರ್ಗ ಯೋಜನೆಯಡಿ ಪರಿಸರ ರಂರಕ್ಷಣೆ ಈ ರೀತಿ ಸೇವಾ ಕಾರ್ಯಗಳನ್ನು ಮಾಡಲಾಗಿದೆ ಎಂದರು. ಒಂದು ಕ್ಲಬ್‌ನ ಅಧ್ಯಕ್ಷರು ಉತ್ಸುಕರಾದರೆ ಇಡೀ ಜಿಲ್ಲೆಯ ಕ್ಲಬ್‌ಗಳೆ ಸಕ್ರೀಯವಾಗುತ್ತದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತಾ ಪೂಜಾರಿ, ಉಪಾಧ್ಯಕ್ಷ ಸಂತೋಷ್ ಸಾಲಿಯಾನ್, ಪತ್ರಕರ್ತ ಹರೀಶ್ ಆಚಾರ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೂಬ ಪರವ ಇವರನ್ನು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು
ವೇದಿಕೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಸದಸ್ಯ ಶಶಿಧರ್ ವೈ. ಶೆಟ್ಟಿ, ಕ್ಲಬ್‌ನ ಕಾರ್ಯದರ್ಶಿ ಸದಾನಂದ ಸಾಲಿಯಾನ್, ಕೋಶಾಧಿಕಾರಿ ರಾಜೇಶ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ವಲಯಾಧ್ಯಕ್ಷ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಉದಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸದಾನಂದ ಸಾಲಿಯಾನ್ ವರದಿ ಮಂಡಿಸಿ ವಂದಿಸಿದರು. ತಿಲಕ ಎಂ ರಾವ್ ಪ್ರಾರ್ಥಿಸಿದರು. ದೀಕ್ಷಿತಾ ಸುರೇಶ್ ಶೆಟ್ಟಿ ನೀತಿ ಸಂಹಿತೆ ವಾಚಿಸಿದರು. ಅಕ್ಷತಾ ದಿಲೀಪ್ ಶೆಟ್ಟಿ ಧ್ವಜವಂದನೆ ನೆರವೇರಿಸಿದರು.
previous post
