Blog

ಮಾಳ ಶ್ರೀ ಗುರುಕುಲ ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವದ ಸಂಭ್ರಮ


ಕಾರ್ಕಳ: ಶ್ರೀ ಗುರುಕುಲ ವಿದ್ಯಾವರ್ಧಕ ಸಂಘ(ರಿ.)
ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇದರ ಅಮೃತ ಮಹೋತ್ಸವ ಕಾರ್ಯಕ್ರಮ ಡಿ.26 ರಿಂದ 28 ರವರೆಗೆ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಅಧ್ಯಕ್ಷರಾದ ಡಾ. ಎಂ ಪ್ರಭಾಕರ್ ಜೋಶಿ ಹೇಳಿದರು ಅವರು ಬುಧವಾರ ಕಾರ್ಕಳ ಪತ್ರಿಕಾ  ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಿಸೆಂಬರ್ 26 ಶುಕ್ರವಾರದಂದು ಬೆಳಿಗ್ಗೆ 8 ಗಂಟೆಗೆ ವಾಸ್ತು ಪೂಜೆ ಮತ್ತು ಗಣ ಹೋಮ ನೂತನ ತರಗತಿ ಕೊಠಡಿಗಳ ಸಭಾಭವನ ಮತ್ತು ಪ್ರವೇಶದಾರದ ಉದ್ಘಾಟನೆ ಬೆಳಿಗ್ಗೆ 11 ಗಂಟೆಗೆ ಧ್ವಜಾರೋಹಣ ಮತ್ತು ದೀಪ ಪ್ರಜ್ವಲನೆ ನಡೆಯಲಿದೆ .ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಗೋಪಾಲ್ ಶೇರಿಗಾರ್, ಮುಖ್ಯ ಅತಿಥಿಗಳಾಗಿ ಡಾ.ಎಂ. ವೀರಪ್ಪ ಮೊಯ್ಲಿ ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 5.00ಕ್ಕೆ ಸಾಂಸ್ಕೃತ ನೃತ್ಯ ವೈಭವ ಕಾರ್ಯಕ್ರಮ ಜೋಡು ಜೀಟಿಗೆ ಜನಪದ ತುಳು ನಾಟಕ ನಡೆಯಲಿದೆ . ಡಿಸೆಂಬರ್ 27 ಶನಿವಾರದಂದು ಸಭಾ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ ಸಂಜೆ 5:00ಗೆ ಸಾಂಸ್ಕೃತಿಕ ವೈವಿಧ್ಯ, ಶಾಲಾ ಮಕ್ಕಳಿಂದ ಭಕ್ತ ಪ್ರಹ್ಲಾದ ಪೌರಾಣಿಕ ನಾಟಕ ನಡೆಯಲಿದೆ. ರಾತ್ರಿ 7:00ಗೆ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮಾಜಿ ಸಚಿವರು ಕಾರ್ಕಳ ಶಾಸಕರ ವಿ ಸುನಿಲ್ ಕುಮಾರ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ರಾತ್ರಿ 9:00ಗೆ ಸದ್ಭಾವನ ಮಹಿಳಾ ಯಕ್ಷಗಾನ ಮಂಡಳಿ ಬೆಂಗಳೂರು ಇವರಿಂದ ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನ ನಡೆಯಲಿದೆ .ಡಿ. 28 ಆದಿತ್ಯವಾರ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಕಾರ್ಯಕ್ರಮ ನಡೆಯಲಿದ್ದು ಸಭಾಧ್ಯಕ್ಷತೆಯನ್ನು ರಾಮಕೃಷ್ಣ ಮಠ ಬೆಂಗಳೂರು ಇದರ ಅಧ್ಯಕ್ಷರಾದ ಸ್ವಾಮೀ ಚಿತಕಾನಂದಾಜೀ ವಹಿಸಲಿದ್ದಾರೆ ಬಳಿಕ ಶಾಲಾ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7:00ಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸಭಾಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ .ವೀರೇಂದ್ರ ಹೆಗ್ಡೆ ಮುಖ್ಯ ಅತಿಥಿಗಳಾಗಿ ಆಳ್ವಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಅಳ್ವ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ರಾತ್ರಿ ಒಂಬತ್ತರಿಂದ ಸಂಗೀತ ರಸಮಂಜರಿ ರಾತ್ರಿ ಹತ್ತು ಮೂವತ್ತರಿಂದ ಗುರುಕುಲ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಬಾಕಿಲ್ ದೆಪ್ಪುಲೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಪತ್ರಿಕಾಗೋಷ್ಠಿಯಲ್ಲಿ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ ಅಮೃತ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷ ನಾಗಭೂಷಣ ಜೋಶಿ ಗುರುಕುಲ ಶಾಲೆಯ ಸಂಚಾಲಕ ಸುಧಾಕರ ಡೊಂಗ್ರೆ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ನಾಗಭೂಷಣ್ ಮರಾಠೆ ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು.

Related posts

ಮಿಯ್ಯಾರು ಕಂಬಳ ಪ್ರದೇಶದಲ್ಲಿ ತ್ಯಾಜ್ಯ

Madhyama Bimba

ಪತ್ರಕರ್ತರಿಗೆ ಸರಕಾರಿ ಸವಲತ್ತು  ನೀಡಿ – ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಮನವಿ ಸಲ್ಲಿಸಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ

Madhyama Bimba

ನ್ಯಾಯವಾದಿ ಎಂ ಕೆ ವಿಜಯ ಕುಮಾರ್ ಸ್ಮರಣಾರ್ಥ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More