ಮೂಡುಬಿದಿರೆ

ಎಕ್ಸಲೆಂಟ್ ಸಂಗೀತ ಸಂಜೆಗೆ ತಲೆದೂಗಿದ ರಾಜಾಂಗಣ

ಸಂಗೀತ ಲೋಕದ ಸಾಮ್ರಾಟ ಪದ್ಮಶ್ರೀ ಪಂ. ಎಂ.ವೆಂಕಟೇಶ್ ಕುಮಾರ್ ಹಿಂದೂಸ್ಥಾನಿ ಗಾಯನ, ಯುವ ಸಿತಾರ್ ವಾದಕ ಅಂಕುಶ ನಾಯಕ್ ಶಾಸ್ತ್ರೀಯ ಸಂಗೀತ ಎಕ್ಸಲೆಂಟ್ ನಲ್ಲಿ ಇಂದು ಗಾನ ಮಾಧುರ್ಯದ ಅನುರಣನ. ಜಾಗತಿಕ ಲೋಕದ ಹಿಂದೂಸ್ಥಾನಿ ಗಾಯಕ ವೆಂಕಟೇಶ್ ಕುಮಾರ್ ಗಾನ ಮಾಧುರ್ಯಕ್ಕೆ ಶಿಕ್ಷಣ ಪ್ರೇಮಿಗಳು ಮೈ ಮರೆತು ಮೆರೆದರು.

ಅವರಿಗೆ ಸಾಥ್ ನೀಡಿದವರು ಹಾರ್ಮೋನಿಯಂ ನಲ್ಲಿ ಶಿಕ್ಷಣ ತಜ್ಞ ನರೇಂದ್ರ ಎಲ್. ನಾಯಕ್, ತಬ್ಲದಲ್ಲಿ ಕೇಶವ ಜೋಶಿ, ಪಖವಾಜ್ ನಲ್ಲಿ ಶ್ರೀದತ್ ಪ್ರಭು. ಅವರ ಜುಗಲಬಂಧಿ ಗಾನ ಮಾಧುರ್ಯಕ್ಕೆ ಮಧುರ ಚುಕ್ಕೆ ನೀಡಿತು. ಅವರಿಗೆ ಸಾಥ್ ನೀಡಿದವರು ತಾನಾಪುರದಲ್ಲಿ ಬಸವರಾಜ ವಂದಲಿ, ಸುಶಾಂತ್ ಸಾಲ್ಯಾನ್, ತಾಳದಲ್ಲಿ ಧನಶ್ರೀ ಪ್ರಭು ಸಹಕರಿಸಿದರು. ಮುಂಚಿತವಾಗಿ ಅಂಕುಶ್ ನಾಯಕ್ ಅವರ ಶಾಸ್ತ್ರೀಯ ಸಿತಾರ್ ವಾದನ, ಅವರಿಗೆ ಸಾಥ್ ನೀಡಿ ತಬ್ಲದಲ್ಲಿ ಹೇಮಂತ್ ಜೋಶಿಯವರ ಜುಗಲ್ ಬಂದಿ ಸಂಗೀತ ರಸಿಕರ ಮನ ಸೂರೆಗೊಂಡಿತು.
ಸಂಗೀತ ಮನಸ್ಸನ್ನು ಶುದ್ಧಗೊಳಿಸುವಂತಹ ಅಪೂರ್ವ ಕಲೆ. ಅದು ಹೃದಯದ ಭಾಷೆ. ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಈ ರೀತಿಯ ಸಂಗೀತ ಆರಾಧನೆ ನಡೆಯುವುದು ವಿದ್ಯಾರ್ಥಿಗಳಿಗೆ ಉತ್ತಮ ಪರಿಣಾಮ ಬೀರಲಿದೆ ಎಂದು ಪದ್ಮಶ್ರೀ ಪಂಡಿತ್ ವೆಂಕಟೇಶ ಕುಮಾರ್ ಸಭೆಯನ್ನುದ್ದೇಶಿಸಿ ಹೇಳಿದರು.

ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸನ್ಮಾನ ಪತ್ರ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ ಸಂಸ್ಕೃತಿಕ ಮನಸ್ಸು ಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುತ್ತದೆ. ವಿದ್ಯಾರ್ಥಿಗಳ ಮನಸ್ಸು ಅರಳಿಸಲು ಸಂಗೀತ ಕಾರ್ಯಕ್ರಮ ಪ್ರಮುಖ ಸಾಧನ. ಶಿಕ್ಷಣದ ಒತ್ತಡ ಕಡಿಮೆ ಮಾಡಿ ವಿಶ್ರಾಂತಿ ನೀಡಲು ಸಂಗೀತ ಬೇಕು ಎಂದರು.
ಉದ್ಯಮಿ ಶ್ರೀಪತಿ ಭಟ್, ವಿಶ್ರಾಂತ ಪ್ರಾಧ್ಯಾಪಕ ರಾಮಚಂದ್ರ ಭಟ್, ಎಕ್ಸಲೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸಿಬಿಎಸ್‌ಸಿ ಪ್ರಾಂಶುಪಾಲರಾದ ಶ್ರೀ ಪ್ರಸಾದ್ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ವಂದಿಸಿದರು. ಉಪನ್ಯಾಸಕ ಡಾ. ವಾದಿರಾಜ ಕಲ್ಲು ರಾಯ ನಿರೂಪಿಸಿದರು.

Related posts

ಡಾ. ಮೋಹನ್ ಆಳ್ವ ಹುಟ್ಟೂರ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ – ಜಾತಿ ಧರ್ಮ ಮೀರಿ ಬೆಳೆದ ಶಕ್ತಿಗೆ ಗೌರವಾರ್ಪಣೆ ನಮ್ಮ ಭಾಗ್ಯ: ಒಕ್ಕೊರಲ ಅಭಿಪ್ರಾಯ

Madhyama Bimba

ಮೂಡುಬಿದಿರೆ ವಕೀಲರ ಸಂಘಕ್ಕೆ ಶರತ್ ಶೆಟ್ಟಿ ಅಧ್ಯಕ್ಷ- ಜಯಪ್ರಕಾಶ್ ಭಂಡಾರಿ ಪ್ರಧಾನ ಕಾರ್ಯದರ್ಶಿ

Madhyama Bimba

ಪಂಚಾಯತ್ ನೌಕಕರ ಮುಷ್ಕರ: ಜನಸೇವೆಯಲ್ಲಿ ವ್ಯತ್ಯಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More