ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಯು ಕಾರ್ಕಳದಲ್ಲಿ ವ್ಯವಸ್ಥಿತವಾಗಿ ಜಾರಿಯಾಗಿರುತ್ತದೆ. ಕಾರ್ಕಳದಲ್ಲಿ ಒಟ್ಟು ೩೬ ಸಾವಿರ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದು ಗೃಹಲಕ್ಷ್ಮೀ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಇದು ಸಾಕ್ಷಿಯಾಗಿದೆ ಎಂದು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಪೂಜಾರಿ ಹೇಳಿದರು.

ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ ಮಹಿಳೆಯರು ಸಂತೃಪ್ತರಾಗಿದ್ದು ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾರೆ. ಇದರಿಂದ ವಿಚಲಿತರಾಗಿರುವ ಬಿಜೆಪಿ ನಾಯಕರು ಗೃಹಲಕ್ಷ್ಮಿ ಯೋಜನೆಯ ವಿಚಾರವಾಗಿ ಅನಗತ್ಯ ಹೇಳಿಕೆಗಳನ್ನು ನೀಡಿ ಜನತೆಯ ಮದ್ಯೆ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ. ಸತ್ಯವನ್ನು ತಿರುಚಿ ಸುಳ್ಳನ್ನು ಹಬ್ಬಿಸುವುದು ಬಿಜೆಪಿಯವರ ಹಳೆಯ ಚಾಳಿಯಾಗಿದೆ. ಆದರೆ ಜನರಿಗೆ ಸತ್ಯವನ್ನು ತಿಳಿಸುವುದು ನಮ್ಮ ಕರ್ತವ್ಯವಾಗಿರುತ್ತದೆ. ಹಾಗಾಗಿ ಈ ವಿಚಾರವನ್ನು ಜನರ ಮುಂದೆ ಇಡಲು ಬಯಸುತ್ತೇವೆ.

ಕಾರ್ಕಳ ಕ್ಷೇತ್ರದಲ್ಲಿ ಒಟ್ಟು ಸಮಾರು 36 ಸಾವಿರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಗಳಿದ್ದು ಅವರೆಲ್ಲರೂ ಒಟ್ಟು 23 ಕಂತುಗಳಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಪಡೆದುಕೊಂಡಿರುತ್ತಾರೆ.
ಯಾರೆಲ್ಲಾ ಫಲಾನುಭವಿಗಳು ಇದ್ದರೋ ಅವರೆಲ್ಲರ ಬ್ಯಾಂಕ್ ಖಾತೆಗೆ ನೇರವಾಗಿ ಗೃಹಲಕ್ಷ್ಮೀ ಹಣವು ತಲುಪುತ್ತಿದೆ. ಸರ್ಕಾರದಿಂದ ಪಡೆದ ಹಣವನ್ನು ಪ್ರತಿಯೊಬ್ಬ ಗೃಹಿಣಿಯು ತಮ್ಮ ಅಗತ್ಯತೆಗಳನ್ನು ಪೂರೈಸಲು, ಆರೋಗ್ಯಕ್ಕಾಗಿ, ಮಕ್ಕಳ ಶಿಕ್ಷಣಕ್ಕಾಗಿ, ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಮುಂತಾದ ತಮ್ಮ ಅಗತ್ಯತೆಗೆ ತಕ್ಕಂತೆ ಗೃಹಲಕ್ಷ್ಮೀ ಹಣವನ್ನು ಉಪಯೋಗಿಸಿ ಅತ್ಯಂತ ಸಂತೃಪ್ತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ದಂಗೆ ಗಲಭೆಕೋರ ಮನಸ್ಥಿತಿಯ ಬಿಜೆಪಿಯು ಸಾರ್ವಜನಿಕರು ನೆಮ್ಮದಿಯಿಂದ ಜೀವನ ಸಾಗಿಸುವುದನ್ನು ನೋಡಲಾಗದೆ ಗೃಹಲಕ್ಷ್ಮೀ ವಿಚಾರದಲ್ಲಿ ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯಿಂದ ಬಿಜೆಪಿ ಕಂಗೆಟ್ಟಿರುವುದನ್ನು ಸೂಚಿಸುತ್ತದೆ.
ಗೃಹಲಕ್ಷ್ಮೀ ಹಣವು ಖಾತೆಗೆ ಪಾವತಿಯಾಗುವಾಗ ಒಂದೆರಡು ತಿಂಗಳು ಹೆಚ್ವುಕಮ್ಮಿ ಆಗಬಹುದು, ಅದು ಸಹಜ ಪ್ರಕ್ರಿಯೆ, ಪ್ರತಿದಿನ ಉದಯಿಸುವ ಸೂರ್ಯನೂ ಒಂದೇ ಸಮಯದಲ್ಲಿ ಉದಯಿಸುವುದಿಲ್ಲ. ಹಾಗಿರುವಾಗ ಸರ್ಕಾರದ ಅನುದಾನವಾಗಿರುವ ಗೃಹಲಕ್ಷ್ಮೀ ಯೋಜನೆಯಲ್ಲಿಯು ಒಂದೆರಡು ತಿಂಗಳುಗಳ ವ್ಯತ್ಯಾಸ ಆಗಿರಬಹುದು, ಆದರೆ ಕಾಂಗ್ರೆಸಿನ ಯೋಜನೆಗಳು ಮನೆ ಮನೆಗೆ ತಲುಪಿರುವ ಆತ್ಮತೃಪ್ತಿ ನಮಗಿದೆ.
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ನೀಡುವಾಗ ಅದನ್ನು ವಿರೋದಿಸಿದವರು, ಯೋಜನೆಗೆ ಅಡ್ಡಿಪಡಿಸಿದವರು, ಬೋಳ ಗ್ರಾಮದ ಗ್ರಾಮ ಸಭೆಯಲ್ಲಿಯೇ ಗ್ಯಾರಂಟಿ ಯೋಜನೆಗಳನ್ನು ನೀಡುವುದಕ್ಕೆ ವಿರೋದ ವ್ಯಕ್ತಪಡಿಸಿರುವ ಇತಿಹಾಸ ಇರುವ ಬಿಜೆಪಿಗರು ಈಗ ಯೋಜನೆಯ ಯಶಸ್ಸಿನಿಂದ ಕಂಗೆಟ್ಟು ವಿಚಿತ್ರ ಹೇಳಿಕೆಗಳನ್ನು ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಜನ ವಿರೋಆi, ಗ್ಯಾರಂಟಿ ಯೋಜನೆಗಳ ವಿರೋದಿ ಬಿಜೆಪಿಯವರ ಅಪಪ್ರಚಾರಗಳಿಗೆ ಕಾರ್ಕಳದ ಜನತೆ ಕಿವಿಗೊಡಬಾರದು ಎಂದು ಭಾನು ಭಾಸ್ಕರ್ ಪೂಜಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
