ಮೂಡುಬಿದಿರೆ

ಆದರ್ಶ ಬೆಳ್ಳಿ ಹಬ್ಬ, ವಿಶೇಷ ಚೇತನರ ಸಮಾವೇಶ

ಮೂಡುಬಿದಿರೆ: ವಿಕಲಚೇತನರಿಗೆ ಸರ್ಕಾರದಿಂದ ನೀಡಲಾಗುವ ಸವಲತ್ತುಗಳು ವಿಶೇಷ ಆಧ್ಯತೆಯಲ್ಲಿ  ತಲುಪುವಂತಾಗಬೇಕು ಎಂದು ದ.ಕ ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಮುರಳೀಧರ ನಾಯ್ಕ್  ಹೇಳಿದರು.

ಮೂಡುಬಿದಿರೆ ಆದರ್ಶ ಸಂಸ್ಥೆಯ ವರ್ಷಾಚರಣೆಯ ಪ್ರಯುಕ್ತ  ಸಮಾಜಮಂದಿರದಲ್ಲಿ ಇಂದು ಬೆಳ್ಳಿ ಹಬ್ಬ ಪ್ರಯುಕ್ತ ನಡೆದ ವಿಶೇಷ ಚೇತನರ ಸಮಾವೇಶ ಹಾಗೂ ಕಲಾಮೇಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಸಮಾವೇಶ ಉದ್ಘಾಟಿಸಿದರು. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ ಮುಖ್ಯ ಅತಿಥಿಯಾಗಿದ್ದರು.ಆದರ್ಶ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗಿಸ್, ನಿರ್ದೇಶಕರಾದ ಇಮ್ಯಾನುವೆಲ್ ಮೋನಿಸ್, ಶರ್ಲಿ ಟಿ.ಬಾಬು ಉಪಸ್ಥಿತರಿದ್ದರು,ಸಂಸ್ಥಯ ಕಾರ್ಯಕರ್ತರಾದ ಸಂದ್ಯಾ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ವಂದಿಸಿದರು.

ಉದ್ಘಾಟನೆಗೆ ಮುಂಚಿತವಾಗಿ ಸರ್ಕಾರಿ ಪ್ರಾಥಮಿಕ ಶಾಲೆ (ಲೇಬರ್ ಶಾಲೆ) ಬಳಿಯಿಂದ ಸಮಾಜಮಂದಿರದವರೆಗೆ ವಿಶೇಷಚೇತನರು, ಪೋಷಕರು, ಶಿಕ್ಷಕರ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಚೇತನರಿಗೆ ಕಲಾಮೇಳ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

Related posts

ಶಿರ್ತಾಡಿಯಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಸಮಾರಂಭ

Madhyama Bimba

ಜ 21:ಬೋರುಗುಡ್ಡೆ ಶ್ರೀ ಸತ್ಯನಾರಾಯಣ ದೇವಸ್ಥಾನದ ಗರ್ಭಗೃಹ ಶಿಲಾನ್ಯಾಸ

Madhyama Bimba

ಆದರ್ಶ ರಜತ ಮಹೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More