ಕಾರ್ಕಳಹೆಬ್ರಿ

ದೊಂಡೇರಂಗಡಿ ದಿ. ಯತೀಶ್ ಶೆಟ್ಟಿ ಸ್ಮರಣಾರ್ಥ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

ದೊಂಡೇರಂಗಡಿ ದಿ.ಯತೀಶ್ ಶೆಟ್ಟಿ ಸ್ಮರಣಾರ್ಥವಾಗಿ ಯತೀಶ್ ಶೆಟ್ಟಿ ಅಭಿಮಾನಿ ಬಳಗ ಸಂಯೋಜಿಸಿದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವು ದೊಂಡೇರಂಗಡಿಯಲ್ಲಿ ನಡೆಯಿತು.


ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರು ದಿ.ಅರವಿಂದ ಹೆಗ್ಡೆ ಕ್ರೀಡಾಂಗಣ ಉದ್ಘಾಟಿಸಿ, ಕ್ರೀಡಾಳುಗಳಿಗೆ ಶುಭ ಕೋರಿದರು.


ಮುನಿಯಾಲ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಧನಲಕ್ಷ್ಮೀ ಪೂಜಾರಿ ಮತ್ತು ಶಗುನ್ ವರ್ಮಾ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು.

ಎರಡು ವಿಭಾಗಗಳಲ್ಲಿ ನಡೆದ ಪಂದ್ಯಾಟದ ವಿಜೇತರಿಗೆ ನಗದು ಸಹಿತ ಯತೀಶ್ ಟ್ರೋಫಿ ವಿತರಿಸಲಾಯಿತು.

ಫಲಿತಾಂಶ ಕಾರ್ಕಳ ವಿಧಾನ ಸಭಾ ಮಟ್ಟದ ಫಲಿತಾಂಶ
ಪ್ರಥಮ : ದಿ ಯತೀಶ್ ಶೆಟ್ಟಿ ಅಭಿಮಾನಿ ಬಳಗ ದೊಂಡೇರಂಗಡಿ, ದ್ವಿತೀಯ : ಅದಿಶ್ ಪ್ರೆಂಡ್ಸ್ ಕಡ್ತಲ ತೃತೀಯ : ಯಶಸ್ವಿ ಪ್ರೆಂಡ್ಸ್ ದೊಂಡೇರಂಗಡಿ, ಚತುರ್ಥ : ಕ್ರೇಜಿ ಬಾಯ್ಸ್ ಮುನಿಯಲ್
ರಾಷ್ಟ್ರ ಮಟ್ಟದ ಅಹ್ವಾನಿತ ತಂಡಗಳ ಫಲಿತಾಂಶ
ಪ್ರಥಮ ಆಳ್ವಾಸ್ ಮೂಡಬಿದ್ರೆ, ದ್ವಿತೀಯ ಉತ್ತರ ಕನ್ನಡ , ತೃತೀಯ ಏನ್. ಎಂ. ಸಿ ಸುಳ್ಯ, ಚತುರ್ಥ ಎಸ್. ಡಿ. ಎಂ ಉಜಿರೆ

Related posts

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ: ವಿಶ್ವ ಕ್ಷಯರೋಗ ದಿನಾಚರಣೆ

Madhyama Bimba

ಶುಲ್ಕ ಮರುಪಾವತಿ: ಅರ್ಜಿ ಆಹ್ವಾನ

Madhyama Bimba

ಶುಲ್ಕ ಮರುಪಾವತಿ: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More