ಕಾರ್ಕಳ

ಕರಕರಿ ಫ್ರೆಂಡ್ಸ್ ಸೇವಾ ಬಳಗದ ಕರಕರಿ ಫ್ರೆಂಡ್ಸ್ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ

ಬೈಲೂರು: ಕರಕರಿ ಫ್ರೆಂಡ್ಸ್ ಸೇವಾ ಬಳಗ ಕರ್ನಾಟಕ ಇವರ ನೇತೃತ್ವದಲ್ಲಿ ಗೋವಿಂದೂರು ಶ್ರೀ ಅನಂತಮತಿ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಮತ್ತು ಯರ್ಲಪಾಡಿ ಯುವಕ ಮಂಡಲ ಗೋವಿಂದೂರು ಇವರ ಸಹಕಾರದೊಂದಿಗೆ ಕರಕರಿ ಫ್ರೆಂಡ್ಸ್ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಡಿ. 28ರಂದು ಗೋವಿಂದೂರು ಶ್ರೀಅನಂತಮತಿ ಶಾಲಾ ಮೈದಾನದಲ್ಲಿ ಪೂರ್ವಾಹ್ನ ಗಂಟೆ 9.00ರಿಂದ ನಡೆಯಲಿದೆ.


ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ 9.00ಗಂಟೆಯಿಂದ ಸ್ಥಳೀಯ ಸಂಘ ಸಂಸ್ಥೆಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು, ಸಂಜೆ 4.00ರಿಂದ ಕಾರ್ಕಳ ತಾಲೂಕು ಮಟ್ಟದ ಹಗ್ಗಜಗ್ಗಾಟ ಪಂದ್ಯ ನಡೆಯಲಿದೆ. ಪಂದ್ಯಾಟವು ತಾಲೂಕು ಮಟ್ಟದ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದೆ.


ಸಾಂಸ್ಕೃತಿಕ ಅಂಗವಾಗಿ ಸಾಯಂಕಾಲ 7.00ರಿಂದ ಅಂಗನವಾಡಿ ಪುಟಾಣಿಗಳು, ಶಾಲಾ ಮಕ್ಕಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನಂತರ ಕಲಾಶ್ರೀ ಕುಸಲ್ದ ಕಲಾವಿದೆರ್ ಬೆದ್ರ ಇವರಿಂದ ‘ನಾಲಾಯಿ ಮಗುರುಜಿ; ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

Related posts

ಪಳ್ಳಿ ಪದವಿ ಪೂರ್ವ ಕಾಲೇಜು: ಶಾಲಾ ಪ್ರಾರಂಭೋತ್ಸವ ಮತ್ತು ಪುಸ್ತಕ, ಸಮವಸ್ತ್ರ ವಿತರಣೆ

Madhyama Bimba

ರೋಟರಿ ಕ್ಲಬ್ ಕಾರ್ಕಳ ಮತ್ತು ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಇಂಟರ್ ಡಿಸ್ಟ್ರಿಕ್ಟ್ ಜಾಯಿಂಟ್ ಮೀಟಿಂಗ್

Madhyama Bimba

ಡಾ| ಅರುಣ್ ಉಳ್ಳಾಲ್ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿರುವುದು ಖಂಡನೀಯ: ರಮಿತಾ ಶೈಲೇಂದ್ರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More