ಕಾರ್ಕಳ

ನಿಟ್ಟೆಯಲ್ಲಿ ಕ್ರಿಸ್ಮಸ್ ಆಚರಣೆ

ನಿಟ್ಟೆ: ಕಾರ್ಕಳದ ನಿಟ್ಟೆ ಕ್ಯಾಂಪಸ್ ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಡಿ.23ರಂದು ಆಚರಿಸಲಾಯಿತು.

 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ರೈಸ್ಟ್ ಕಿಂಗ್ ಚರ್ಚ್ ಕಾರ್ಕಳದ ಸಹಾಯಕ ಧರ್ಮಗುರು ರೆವರೆಂಡ್ ಫಾದರ್ ಅವಿನಾಶ್ ಲೆಸ್ಲೆ ಪಾಯ್ಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಪ್ರೀತಿಯನ್ನು ನೀಡುವ ಮತ್ತು ಹರಡುವ ಮನೋಭಾವದ ಬಗ್ಗೆ ಸ್ಪೂರ್ತಿದಾಯಕ ಚಿಂತನೆ ನಡೆಸುವುದು ಅನುಸರಣೀಯ ಎಂದರು.


ಗೌರವಾನ್ವಿತ ಅತಿಥಿಗಳಾದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ಇಂತಹ ಆಚರಣೆಗಳು ಕ್ಯಾಂಪಸ್ ನಲ್ಲಿ ಒಂದು ರೀತಿಯ ಲವಲವಿಕೆಯನ್ನು ಅರಳಿಸುತ್ತದೆ ಎಂದರು.


ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಆಫ್ ಕ್ಯಾಂಪಸ್ ಸೆಂಟರ್ ನ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ. ಎ. ಯೋಗೀಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಪ್ರಾಂಶುಪಾಲರು, ವಿದ್ಯಾರ್ಥಿ ವಸತಿಗೃಹದ ಮುಖ್ಯಸ್ಥರು ಉಪಸ್ಥಿತರಿದ್ದರು.

Related posts

ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಮಕರ ಸಂಕ್ರಾಂತಿ ಸಂಭ್ರಮ

Madhyama Bimba

ಕಬ್ಬಿನಾಲೆಯಲ್ಲಿ ಹೆಚ್ಚಿದ ಆನೆ ಹಾವಳಿ- ಭಯದಿಂದ ಮನೆ ಬಿಟ್ಟು ಹೋದ ಕುಟುಂಬ

Madhyama Bimba

ಪ್ರೋತ್ಸಾಹಧನ ಸೌಲಭ್ಯ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More