ಕಾರ್ಕಳ

ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಮಕರ ಸಂಕ್ರಾಂತಿ ಸಂಭ್ರಮ

ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಜ. 14ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.


ಕಾರ್ಯಕ್ರಮದ ಅಂಗವಾಗಿ ಶಾಲಾ ಪ್ರಾಂಶುಪಾಲರು ಮಕ್ಕಳಿಗೆ ಮಕರ ಸಂಕ್ರಾಂತಿ ಹಬ್ಬದ ಮಹತ್ವ, ಅದರ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ವಿಶೇಷತೆಯನ್ನು ವಿವರಿಸಿದರು.

ಬಳಿಕ ಮಕ್ಕಳು ಸ್ವತಃ ಗಾಳಿಪಟಗಳನ್ನು ತಯಾರಿಸಿ, ಅದರ ಮೇಲೆ ತಮ್ಮ ಭವಿಷ್ಯದ ಕನಸುಗಳನ್ನು ಮತ್ತು ಆಶಯಗಳನ್ನು ಬರೆದು ಗಾಳಿಪಟ ಹಾರಿಸುವ ಮೂಲಕ ಈ ಹಬ್ಬದಲ್ಲಿ ಸಂತೋಷದಿಂದ ಭಾಗವಹಿಸಿದರು.

ಈ ಸಂಭ್ರಮಾಚರಣೆಯ ಅಂಗವಾಗಿ ಸಾಂಪ್ರದಾಯಿಕ ಪೊಂಗಲನ್ನು ತಯಾರಿಸಿ ಹಬ್ಬದ ಸೊಗಡನ್ನು ಹೆಚ್ಚಿಸಲಾಯಿತು. ಮಕ್ಕಳಿಗೆ ಎಳ್ಳು-ಬೆಲ್ಲವನ್ನು ವಿತರಿಸುವ ಮೂಲಕ ಪರಸ್ಪರ ಪ್ರೀತಿ, ಸೌಹಾರ್ದ ಮನೋಭಾವನೆಯನ್ನು ಬೆಳೆಸಲಾಯಿತು.

Related posts

ಶಿವಪುರ ಶಂಕರದೇವ ದೇವಸ್ಥಾನ : ಸಮಾಲೋಚನಾ ಸಭೆ

Madhyama Bimba

ಸೂರಿಮಣ್ಣು : ಭಜನಾ ಸುವರ್ಣ ಸಂಭ್ರಮ ಸಂಪನ್ನ

Madhyama Bimba

ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್ ಕಡಿತಗೊಳಿಸಿದ ಕಾಂಗ್ರೆಸ್ಸ್ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಹರೀಶ್ ನಾಯಕ್, ಜಗದೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ಹಿರ್ಗಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More