ಕಾರ್ಕಳ

ಕಬ್ಬಿನಾಲೆಯಲ್ಲಿ ಹೆಚ್ಚಿದ ಆನೆ ಹಾವಳಿ- ಭಯದಿಂದ ಮನೆ ಬಿಟ್ಟು ಹೋದ ಕುಟುಂಬ

ಹೆಬ್ರಿ ತಾಲೂಕಿನ ಕಬ್ಬಿನಾಲೆ ತಿಂಗಳಮಕ್ಕಿ, ಪೀತ್‌ಬೈಲ್, ಸುತ್ತಮುತ್ತಲಿನ ಪರಿಸರದಲ್ಲಿ ಕಾಡಾನೆಯೊಂದು ಹಲವು ದಿನಗಳಿಂದ ಬೀಡುಬಿಟ್ಟಿದ್ದು, ಅಪಾರ ಪ್ರಮಾಣದಲ್ಲಿ ತೆಂಗು, ಬಾಳೆ, ಅಡಿಕೆ ಮರಗಳನ್ನು ನಾಶಮಾಡಿದೆ.

ಅಲ್ಲದೆ ತಿಂಗಳಮಕ್ಕಿ ಆನಂದ ಗೌಡ ಎಂಬುವವರು ಮನೆಯ ಅಂಗಳದಲ್ಲಿ ಪ್ರತಿ ದಿನ ಓಡಾಡುತ್ತಿದ್ದು, ಭಯಭೀತರಾದ ಇವರು ತಮ್ಮ ಮನೆ ಬಿಟ್ಟು ಬೇರೆಡೆಗೆ ತೆರಳಿದ್ದಾರೆ.   ಸ್ಥಳೀಯರು ಭಯದಿಂದ ಜೀವನ ನಡೆಸುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆಯವರು ನಿರ್ಲಕ್ಷ್ಯ ವಹಿಸದೆ ಕಾಡಾನೆಯನ್ನು ಅಲ್ಲಿಂದ ಓಡಿಸಬೇಕು. ಹಾಗೆಯೇ ಹಾನಿಯಾದ ಕೃಷಿಗೆ ಸರಕಾರದಿಂದ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಳೆದ 2 ವರ್ಷಗಳಿಂದ ಶಿರ್ಲಾಲು, ಅಂಡಾರು, ಮುಟ್ಲುಪಾಡಿ, ಕಬ್ಬಿನಾಲೆ, ನಾಡ್ಪಾಲು ಕೆಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಕೃಷಿ ಹಾನಿ ಮಾಡುತ್ತಾ ಬಂದಿರುತ್ತದೆ.

Related posts

ಮೂರ್ತೆದಾರರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Madhyama Bimba

ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲ : ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ಹೆಬ್ರಿ: ಕಾರಿಗೆ ಪಿಕ್ ಅಫ್ ವಾಹನ ಡಿಕ್ಕಿ- ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More