ಕಾರ್ಕಳ

ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ

ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗಳು ನಡೆಯದಿರುವುದರಿಂದ ಗ್ರಾಮ ಪಂಚಾಯಿತಿಗಳ 5 ವರ್ಷಗಳ ಅವಧಿಯು 2026 ರ ಜನವರಿ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. 5 ವರ್ಷದ ಅವಧಿಯು ಮುಗಿದ ನಂತರ 27 ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿಯನ್ನು ಜಿಲ್ಲಾಧಿಕಾರಿಯವರು ನೇಮಿಸಿ ಆದೇಶಿಸಿದ್ದಾರೆ. ಫೆ. 15 ರಿಂದ 21ರ ಒಳಗೆ ಎಲ್ಲಾ ಪಂಚಾಯತುಗಳ ಜನಪ್ರತಿನಿಧಿಗಳ ಅಧಿಕಾರ ಮುಗಿಯಲಿದೆ. ಜನಪ್ರತಿನಿಧಿಗಳ ಅವಧಿ ಮುಗಿದ ಕೂಡಲೇ ಆಡಳಿತಾಧಿಕಾರಿಯವರು ಅಧಿಕಾರವನ್ನು ಪಡೆಯಲಿದ್ದಾರೆ.

ಗ್ರಾಮ ಪಂಚಾಯತ್ ಹಾಗೂ ಆಡಳಿತಾಧಿಕಾರಿಗಳ ವಿವರ.

ಬೆಳ್ಳಣ್- ಭಾಸ್ಕರ ಟಿ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಕಾರ್ಕಳ
ಬೋಳ- ಕೃಷ್ಣಾನಂದ, ಸಹಾಯಕ ನಿರ್ದೇಶಕರು ಪಂ. ರಾಜ್ ತಾ.ಪಂ ಕಾರ್ಕಳ
ಬೈಲೂರು- ಗಿರಿಜಮ್ಮ ಎಸ್ ಆರ್. ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಕಳ
ದುರ್ಗಾ- ರೇಣುಕಾ, ಸಹಾಯಕ ಅಭಿಯಂತರರು, ಪುರಸಭೆ ಕಾರ್ಕಳ
ಹಿರ್ಗಾನ – ರವಿಚಂದ್ರ, ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಬಿಇಓ ಕಛೇರಿ ಕಾರ್ಕಳ
ಇನ್ನಾ- ಮಧುಕುಮಾರ್, ಅಭಿಯಂತರರು, ಪಂ.ರಾಜ್ ಉಪವಿಭಾಗ ಕಾರ್ಕಳ
ಕಡ್ತಲ- ಗಂಗಾರಾಮ್ ಎಸ್. ಕುಂಬಾರ್,ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಕಳ
ಕಾಂತಾವರ- ರಮೇಶ್ ಉಳ್ಳಾಗಡ್ಡಿ, ಕೃಷಿ ಅಧಿಕಾರಿ, ಕೃಷಿ ಇಲಾಖೆ ಕಾರ್ಕಳ
ಕುಕ್ಕುಂದೂರು- ತ್ರಿನೇಶ್ವರ್ ಸಿ ಪಿ. ಸಹಾಯಕ ಕಾರ್ಯಪಾಲಕ ಇಂಜೀನಿಯರ್. ಲೋಕೋಪಯೋಗಿ ಇಲಾಖೆ ಕಾರ್ಕಳ
ಮಾಳ- ಮಹಾಬಲ ನಾಯ್ಕ, ಸಹಾಯಕ ಕಾರ್ಯಪಾಲಕ ಇಂಜೀನಿಯರ್, ಪಂ.ರಾಜ್ ಉಪವಿಭಾಗ ಕಾರ್ಕಳ
ಮರ್ಣೆ- ಸುರೇಂದ್ರನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಕಳ
ಮಿಯ್ಯಾರು-ಬೊಂಬಗೊಂಡ, ಸಹಾಯಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಕಳ
ಮುಡಾರು- ಪಲ್ಲವಿ ಹನುಮಂತ ನಾಯಕ್, ಕಿರಿಯ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ, ಇಲಾಖೆ ಕಾರ್ಕಳ
ಮುಂಡ್ಕೂರು-ಲೀನಾ ಬ್ರಿಟ್ರೋ ಮುಖ್ಯಾಧಿಕಾರಿ ಪುರಸಭೆ ಕಾರ್ಕಳ
ನಲ್ಲೂರು – ಈಶ್ವರ ನಾಯ್ಕ, ಸಮುದಾಯ ಸಂಘಟನಾಧಿಕಾರಿ, ಪುರಸಭೆ ಕಾರ್ಕಳ
ನೀರೆ -ಗೋಪಾಲ ತಿಪ್ಪಣ್ಣ ಕಾಕನೂರ, ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಕಳ
ನಿಟ್ಟೆ – ಬಿ.ವಿ.ಶ್ರೀನಿವಾಸ್, ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಕಾರ್ಕಳ
ಪಳ್ಳಿ – ಮನೋಜ್, ಸಹಾಯಕ ಅಭಿಯಂತರರು, ಪಂ.ರಾಜ್ ಉಪವಿಭಾಗ ಕಾರ್ಕಳ
ರೆಂಜಾಳ – ನಿತಿನ್ ಕುಮಾರ್, ವಾಣಿಜ್ಯ ತೆರಿಗೆ ಅಧಿಕಾರಿ, ವಾಣಿಜ್ಯ, ತೆರಿಗೆ ಇಲಾಖೆ ಕಾರ್ಕಳ
ಸಾಣೂರು- ರಾಜರಾಮ್, ಸಹಾಯಕ ಕಮೀಷನರ್, ವಾಣಿಜ್ಯ ತೆರಿಗೆ ಇಲಾಖೆ ಕಾರ್ಕಳ
ಶಿರ್ಲಾಲು – ರವೀಂದ್ರ ಆಚಾರ್, ವಲಯ ಅರಣ್ಯಾಧಿಕಾರಿ ಸಾಮಾಜಿಕ ಅರಣ್ಯ ಕಾರ್ಕಳ
ಎರ್ಲಪಾಡಿ -ಸುಮಲತಾ, ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ ಕಾರ್ಕಳ
ಈದು- ಕುಮಾರ್ ಬಿ.ನಾಯ್ಕ, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕಾರ್ಕಳ
ನಂದಳಿಕೆ -ಇಂದಿರಾ, ಕ್ಷೇತ್ರ ಸಮನ್ವಯ ಅಧಿಕಾರಿ, ಬಿಆರ್‌ಸಿ ಕಾರ್ಕಳ
ಕಲ್ಯಾ- ಶ್ರೀಲತಾ, ಶಿಶು ಅಭಿವೃದ್ಧಿ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಕಳ
ಇರ್ವತ್ತೂರು- ಪ್ರಶಾಂತ್ ರಾವ್ ಎಂ.ವಿ. ಕಾರ್ಯ ನಿರ್ವಾಹಕ ಅಧಿಕಾರಿ ತಾ.ಪಂ ಕಾರ್ಕಳ
ಕೆರ್ವಾಶೆ – ಸಿ ಹೆಚ್ ನವೀನ್ ಕುಮಾರ್, ಕಾರ್ಮಿಕ ನಿರೀಕ್ಷಕರು, ಕಾರ್ಕಳ

Related posts

ರಾಜ್ಯಮಟ್ಟದ ವೈಟ್ ಲಿಫ್ಟಿಂಗ್‌ನಲ್ಲಿ ಎಸ್‌ವಿಟಿಯ ಭುವನೇಶ್ವರಿ ಪ್ರಥಮ

Madhyama Bimba

ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ

Madhyama Bimba

ಕಾರ್ಕಳ: ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ- ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More