ಮೂಡುಬಿದಿರೆ

ಶಿರ್ತಾಡಿಯಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಸಮಾರಂಭ

ಶಿರ್ತಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಬಾರ್ಡ್, ಕೆನರಾ ಬ್ಯಾಂಕ್, ಕೆನರಾ ಫೈನಾನ್ಷಿಯಲ್ ಅಡ್ವೈಸರಿ ಟ್ರಸ್ಟ್ ಹಾಗೂ ಫೈನಾನ್ಷಿಯಲ್ ಲಿಟರಸಿ ಸೆಂಟರ್ ಅಮೂಲ್ಯ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ನಡೆಯಿತು.
ನಬಾರ್ಡ್‌ನ ಡಿಡಿಎಂ ಹಾಗೂ ಎಜಿಎಂ ಶ್ರೀಮತಿ ಸಂಗೀತಾ ಎಸ್. ಕಾರ್ತಾ ಅವರು ಉದ್ಘಾಟಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆ ವ್ಯಕ್ತಿಯ ಜೀವನಮಟ್ಟ ಸುಧಾರಣೆಗೆ ಎಷ್ಟು ಅಗತ್ಯ ಎಂಬುದನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಶಿರ್ತಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಆಶಾಲತಾ ಎಚ್., ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ  ರವಿನಾ ಬಂಗೇರ, ಸಂಜೀವಿನಿ ಜಿ.ಪಿ ಮಟ್ಟದ ಫೆಡರೇಷನ್ ಅಧ್ಯಕ್ಷೆ ಶ್ರೀಮತಿ ಸವಿತಾ ಭಂಡಾರಿ, ಸಿಡಿಪಿಓ ಕಚೇರಿ ಮೇಲ್ವಿಚಾರಕಿ ಶ್ರೀಮತಿ ಶುಭಾ, ಎನ್‌ಆರ್‌ಎಲ್‌ಎಂ ಕ್ಲಸ್ಟರ್ ಮೇಲ್ವಿಚಾರಕಿ ಶ್ರೀಮತಿ ಪ್ರಜ್ವತ ಅವರು ಉಪಸ್ಥಿತರಿದ್ದು ಶುಭಹಾರೈಸಿದರು.
ಫೈನಾನ್ಷಿಯಲ್ ಲಿಟರಸಿ ಸೆಂಟರ್ ಅಮೂಲ್ಯ, ಮಂಗಳೂರು ಹಣಕಾಸು ಸಾಕ್ಷರತಾ ಸಲಹೆಗಾರ  ಲತೇಶ್ ಬಿ. ಅವರು ಬ್ಯಾಂಕಿಂಗ್ ಸೇವೆಗಳು, ಡಿಜಿಟಲ್ ವ್ಯವಹಾರಗಳು, ಉಳಿತಾಯ, ಸಾಲ ಶಿಸ್ತಿನ ಮಹತ್ವ ಹಾಗೂ ಹಣಕಾಸು ಭದ್ರತೆ ಕುರಿತು ಜಾಗೃತಿ ಮೂಡಿಸಿದರು.
ಶ್ರೀಮತಿ ಗೀತಾ  ಪ್ರಾರ್ಥನೆಗೈದರು. , ಶ್ರೀಮತಿ ರೇಖಾ  ಸ್ವಾಗತಿಸಿದರು. ಶ್ರೀಮತಿ ಪ್ರತಿಭಾ  ನಿರೂಪಣೆಗೈದರು.  ಶ್ರೀಮತಿ ಮಮತಾ  ಧನ್ಯವಾದವಿತ್ತರು.

Related posts

ರೇಮಂಡ್ ತಾಕೋಡೆಯವರ ‘ಬೊಳ್ಳಿಲು’ ಕೃತಿ ಬಿಡುಗಡೆ-ಹುಟ್ಟೂರ ಸನ್ಮಾನ: ಎಐ ಯುಗದಲ್ಲೂ ಸಾಹಿತ್ಯ ಸೃಜನಶೀಲತೆಯೇ ಶಾಶ್ವತ: ವಿವೇಕ್ ಆಳ್ವ

Madhyama Bimba

ಆಳ್ವಾಸ್ ಸಿಬಿಎಸ್‌ಇಯಲ್ಲಿ 46ವಿದ್ಯಾರ್ಥಿಗಳು 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

Madhyama Bimba

 ಕಲ್ಲಮುಂಡ್ಕೂರು ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಮಡಿಲಿಗೆ- ಕಾಂಗ್ರೆಸ್ ಬೆಂಬಲಿತರಿಗೆ ಎರಡು ಸ್ಥಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More