ಮೂಡುಬಿದಿರೆ

ರೇಮಂಡ್ ತಾಕೋಡೆಯವರ ‘ಬೊಳ್ಳಿಲು’ ಕೃತಿ ಬಿಡುಗಡೆ-ಹುಟ್ಟೂರ ಸನ್ಮಾನ: ಎಐ ಯುಗದಲ್ಲೂ ಸಾಹಿತ್ಯ ಸೃಜನಶೀಲತೆಯೇ ಶಾಶ್ವತ: ವಿವೇಕ್ ಆಳ್ವ

ಮೂಡುಬಿದಿರೆ: ತುಳು ಕೂಟ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್ ಕ್ಲಬ್, ಜೇಸಿಐ ಮೂಡುಬಿದಿರೆ ತ್ರಿಭುವನ್, ತಾಕೋಡೆ ಅಭಿಮಾನಿ ಬಳಗ, ರಿಕ್ಷಾ ಚಾಲಕರ-ಮಾಲಕರ ಸಂಘ ಹಾಗೂ ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಾಲೋರಿ ಬೊಳ್ಳಿಲು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.


ಹಿರಿಯ ಪತ್ರಕರ್ತ, ಸಾಹಿತಿ ರೇಮಂಡ್ ಡಿಕುನ್ಹ ತಾಕೋಡೆ ಅವರ 22ನೇ ಕೃತಿಯನ್ನು ಅನಾವರಣಗೊಳಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಕೃತಿ ಅನಾವರಣಗೊಳಿಸಿದರು. ಸಾಹಿತ್ಯ ಮತ್ತು ಕವನಗಳು ಮಾನವನ ಮನಸ್ಸಿನ ಆಳದ ಭಾವನೆಗಳಿಂದ ಉದ್ಭವಿಸುವ ಸೃಜನಶೀಲ ಪ್ರಕ್ರಿಯೆಗಳಾಗಿವೆ ಎಂದು ಹೇಳಿದರು.

ಕೃತಿಕಾರ ರೇಮಂಡ್ ಡಿಕುನ್ಹ ಅವರನ್ನು ಹುಟ್ಟೂರ ಸನ್ಮಾನದೊಂದಿಗೆ ಗೌರವಿಸಲಾಯಿತು.
ರೇಮಂಡ್ ಡಿಕುನ್ಹ ಮಾತನಾಡಿ, ಮೂಡುಬಿದಿರೆಯಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರು.

ಕೃತಿಯನ್ನು ಗೀತಾ ಲಕ್ಷ್ಮೀಶ ಶೆಟ್ಟಿ ಪರಿಚಯಿಸಿದರು. ಸಂಗೀತ ಕಾಮತ್ ಸನ್ಮಾನ ಪತ್ರ ವಾಚಿಸಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ತುಳು ಕೂಟ ಬೆದ್ರ ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ, ಅಧ್ಯಕ್ಷ ಧನಕೀರ್ತಿ ಬಲಿಪ, ಪ್ರೆಸ್ ಕ್ಲಬ್ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸುಧಾಕರ ಶೆಟ್ಟಿ, ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ., ರಿಕ್ಷಾ ಚಾಲಕರ-ಮಾಲಕರ ಸಂಘದ ಪ್ರತಿನಿಧಿ ರಾಜೇಶ್ ಸುವರ್ಣ ತಾಕೋಡೆ ಅಭಿಮಾನಿ ಬಳಗದ ಆಲ್ಬರ್ಟ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಸದಾನಂದ ನಾರಾವಿ ನಿರೂಪಿಸಿ ಧನಕೀರ್ತಿ ಬಲಿಪ ಸ್ವಾಗತಿಸಿದರು. ನವೀನ್ ಸಾಲ್ಯಾನ್ ಧನ್ಯವಾದವಿತ್ತರು.

ಹಿರಿಯ ಸಾಹಿತಿ ಸದಾನಂದ ನಾರಾವಿಯವರ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ನಡೆಯಿತು. ಡಾ. ಸುರೇಶ್ ಕುಮಾರ ನೆಗಳಗುಳಿ, ಧನಂಜಯ ಮೂಡುಬಿದಿರೆ, ಗೀತಾ ಲಕ್ಷ್ಮೀಶ ಶೆಟ್ಟಿ, ಪದ್ಮನಾಭ ಮಿಜಾರು, ಅನಿತಾ ಶೆಟ್ಟಿ, ಎಂ. ರಾಘವೇಂದ್ರ ಭಂಡಾರ್ಕರ್, ರಾಮಕೃಷ್ಣ ಶಿರೂರು, ಶರಣ್ಯ ಬೆಳುವಾಯಿ, ಪೂರ್ಣಿಮಾ ಕೋಟ್ಯಾನ್, ಸೌಮ್ಯ ತಿಲಕ್ ಶೆಟ್ಟಿ, ಪ್ರಶಾಂತ್ ಆಚಾರ್ಯ ಎಡಪದವು, ಸವಿತಾ ಕರ್ಕೇರಾ ತಮ್ಮ ಕವನಗಳನ್ನು ವಾಚಿಸಿದರು.

ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು.

Related posts

ಲಯನ್ಸ್: ಉಚಿತ ವಾಹನ ಚಾಲನಾ ತರಬೇತಿ ಯೋಜನೆ ಆದೇಶ ಪತ್ರ ಹಸ್ತಾಂತರ

Madhyama Bimba

ಆದರ್ಶ ಬೆಳ್ಳಿ ಹಬ್ಬ, ವಿಶೇಷ ಚೇತನರ ಸಮಾವೇಶ

Madhyama Bimba

ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಗೆ ರಶ್ಮಿತಾ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More