ಕಾರ್ಕಳಹೆಬ್ರಿ

ಮುದ್ರಾಡಿ: ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂಘ ಉದ್ಘಾಟನೆ

ಮುದ್ರಾಡಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನತೆಗೆ ಸಾಕಷ್ಟು ಪ್ರಯೋಜನಗಳಾಗಿವೆ. ಊರಿನ ಅಭಿವೃದ್ಧಿಯಾಗಿದೆ, ಧರ್ಮಾಧಿಕಾರಿಗಳು ಸಾಕಾರಗೊಳಿಸಿದ ನೂರಾರು ಜನೋಪಯೋಗಿ ಯೋಜನೆಗಳಿಂದ ಜನರ ಬದುಕು ಹಸನಾಗಿದೆ. ಬಡವರ ಬದುಕು ಕಲ್ಯಾಣವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ ಹೇಳಿದರು.


ಅವರು ಮುದ್ರಾಡಿ ಬಲ್ಲಾಡಿ ವಲಯದಲ್ಲಿ ಉದ್ಘಾಟನೆಗೊಂಡ ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂಘಕ್ಕೆ ಸಂಘದ ದಾಖಲೆಗಳು ಮತ್ತು ಕಾರ್ಯ ವೈಖರಿಗಳ ಮಾಹಿತಿಯನ್ನು ಹಸ್ತಾಂತರ ಮಾಡಿ ಮಾತನಾಡಿದರು.


ಮುದ್ರಾಡಿ ಸುಕುಮಾರ್ ಪೂಜಾರಿಯವರ ನೇತ್ರತ್ವದಲ್ಲಿ ಅತ್ಯಂತ ನಿಷ್ಠೆಯಿಂದ ಸಂಘವನ್ನು ರಚಿಸಲಾಗಿದೆ. ಮುಂದೆ ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂಘವು ಮಾದರಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಶುಭಹಾರೈಸಿದರು.

ಮುದ್ರಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಸಂತಿ ಪೂಜಾರಿ ನೂತನ ಸಂಘಕ್ಕೆ ಶುಭಹಾರೈಸಿದರು. ಸುಕುಮಾರ ಪೂಜಾರಿ ಮುದ್ರಾಡಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಯೋಜನೆಯ ವಲಯಾಧ್ಯಕ್ಷರಾದ ಯೋಗೇಶ್, ಪ್ರಮುಖರಾದ ಮುದ್ದಣ್ಣ ಪೂಜಾರಿ, ಸಂತೋಷ ಪೂಜಾರಿ, ಸುಕುಮಾರ ಪೂಜಾರಿ, ಪತ್ರಕರ್ತರಾದ ಸುಕುಮಾರ್ ಮುನಿಯಾಲ್, ಬಾಲಚಂದ್ರ ಮುದ್ರಾಡಿ, ನೂತನ ಸಂಘದ ಪದಾಧಿಕಾರಿಗಳಾದ ಜಗದೀಶ್ ಆಚಾರ್ಯ, ಹಿರಿಯರಾದ ಗೋಪಾಲ ಆಚಾರ್ಯ, ಭೋಜ ಪೂಜಾರಿ, ಮೇಲ್ವಿಚಾರಕ ಉಮೇಶ್ ಬಿಕೆ, ಸೇವಾಪ್ರತಿನಿಧಿ ಮಮತಾ, ಒಕ್ಕೂಟದವರು, ಸಂಘದವರು ಉಪಸ್ಥಿತರಿದ್ದರು.

ಉಮೇಶ್ ಬಿ.ಕೆ.ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Related posts

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Madhyama Bimba

ರಾಜ್ಯ ಮಟ್ಟದ ಕ್ರೀಡಾಕೂಟ: ನಿಟ್ಟೆಯ ವಿದ್ಯಾರ್ಥಿನಿ ರಶ್ಮಿತಾಗೆ ಬೆಳ್ಳಿಯ ಪದಕ

Madhyama Bimba

ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಮತ್ತು ಋಕ್ ಸಂಹಿತಾ ಮಹಾಯಾಗದ ಆಮಂತ್ರಣ ಪತ್ರ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More