ಕಾರ್ಕಳ

ಕಾರ್ಕಳ ಜೈಹಿಂದ್ ಗೇಮ್ಸ್ ಕ್ಲಬ್ ವತಿಯಿಂದ ‘ಜೈಹಿಂದ್ ಟ್ರೋಫಿ’ ಕ್ರಿಕೆಟ್ ಕ್ರೀಡಾಕೂಟ

ಕಾರ್ಕಳದ ಜಿಎಸ್‌ಬಿ ಸಮಾಜದ ಕಾಲೇಜು ಯುವಕರು ಸೇರಿಕೊಂಡು ಸಮಾಜಮುಖಿ ಕಾರ್ಯಕ್ಕೆ ಪ್ರಾರಂಭಿಸಿದ ಜೈಹಿಂದ್ ಗೇಮ್ಸ್ ಕ್ಲಬ್ ಇದೀಗ 50ನೇ ವರ್ಷ ಪೂರೈಸಿದೆ. ಜೈಹಿಂದ್ ಗೇಮ್ಸ್ ಕ್ಲಬ್‌ನ ಸುವರ್ಣ ಸಂಭ್ರಮದ ಅಂಗವಾಗಿ ‘ಜೈಹಿಂದ್ ಟ್ರೋಫಿ’ ಕ್ರಿಕೆಟ್ ಕ್ರೀಡಾಕೂಟ ಡಿ. 28ರಂದು ಕಾರ್ಕಳ ಗಾಂಧಿಮೈದಾನದಲ್ಲಿ ಜರುಗಿತು.


ಕ್ರೀಡಾಕೂಟದ ಉದ್ಘಾಟನೆಯನ್ನು ಶ್ರೀ ವೆಂಕಟರಮಣ ದೇವಸ್ಥಾನದ ಒಂದನೇ ಮೊಕ್ತೇಸರರಾದ ಕೆ. ಜಯರಾಮ ಪ್ರಭು ನೆರವೇರಿಸಿದರು.
ಈ ಸಂದರ್ಭದಲ್ಲಿ ಜೈಹಿಂದ್ ಗೇಮ್ಸ್ ಕ್ಲಬ್ ಸಂಸ್ಥಾಪಕರು, ಶಾರದೋತ್ಸವ ಸಮಿತಿಯ ಸಂಚಾಲಕರಾದ ಕೆ. ಮುಕುಂದ ಶೆಣೈ ಹಾಗೂ ಹಿರಿಯ ಸದಸ್ಯರು ಉಪಸ್ಥಿತರಿದ್ದರು.


ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಕೆ. ಮುಕುಂದ ಶೆಣೈ, ಹಿರಿಯ ಸದಸ್ಯರಾದ ಶ್ರೀದೇವಿ ಕ್ಯಾಶ್ಯೂಸ್‌ನ ಕೆ. ಗಣೇಶ್ ಕಾಮತ್, ಶಂಕರ್ ಕಾಮತ್, ಸತ್ಯನಾರಾಯಣ ಶೆಣೈ, ವಿನಾಯಕ ಪುರಾಣಿಕ್, ವರದರಾಜ ಶೆಣೈ, ಗೋಪಾಲಕೃಷ್ಣ ಕಾಮತ್, ಪಿ. ಮಂಜುನಾಥ ಪೈ, ವಿನೋದ್ ಪ್ರಭು, ಸಿ. ಸತ್ಯನಾರಾಯಣ ಕಾಮತ್, ಬಿ. ರಾಜಾರಾಮ ಶೆಣೈ  ಉಪಸ್ಥಿತರಿದ್ದರು.

ಕೆ. ದೀಪಕ್ ನಾಯಕ್ ಮತ್ತು ರಾಮನಾಥ ಶೆಣೈ ಕಾರ್ಯಕ್ರಮ ನಿರೂಪಿಸಿ, ವಿಘ್ನೇಶ್ ಶೆಣೈ ವಂದಿಸಿದರು.

ಕ್ರೀಡಾಕೂಟದ ವಿನ್ನರ್ ಆಗಿ ಮಂಗಳೂರಿನ ಡೇಡ್ಲಿ ಪ್ಯಾಂತರ್‍ಸ್, ರನ್ನರ್ ಆಗಿ ಪಡುತಿರುಪತಿ ಕ್ರಿಕೆಟರ್‍ಸ್ ಕಾರ್ಕಳ ಆಯ್ಕೆಯಾದರು.

Related posts

ಕಾರ್ಕಳ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟಿ ಕಳವು

Madhyama Bimba

ಹೆಬ್ರಿಯ ಸಾಧಕರಿಗೆ ಚೈತನ್ಯ ಪುರಸ್ಕಾರ

Madhyama Bimba

ಮುನಿಯಾಲು ಸಂತೋಷ ನಾಯ್ಕ್ ಹೃದಯಘಾತದಿಂದ ನಿಧನ.

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More