ಕಾರ್ಕಳಹೆಬ್ರಿ

ಮುನಿಯಾಲು ಸಂತೋಷ ನಾಯ್ಕ್ ಹೃದಯಘಾತದಿಂದ ನಿಧನ.

ಮುನಿಯಾಲು : ವರಂಗ ಗ್ರಾಮ ಪಂಚಾಯತ್ ಪಡುಕುಡೂರು ಭಾಗದ ನಿಕಟಪೂರ್ವ ಸದಸ್ಯರಾದ ಮುನಿಯಾಲು ಗಾಂಧಿಮೈದಾನ ನಿವಾಸಿ ಸಂತೋಷ ನಾಯ್ಕ್ ( 43 ) ಬುಧವಾರ ಹೃದಯಾಘಾತದಿಂದ ನಿಧನರಾದರು. ಅನಾರೋಗ್ಯದಿಂದ ಇತ್ತೀಚೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬುಧವಾರ ಮನೆಯಲ್ಲಿ ಅಸ್ವಸ್ಥಗೊಂಡಿದ್ದರು. ಕೂಡಲೇ ಸಂತೋಷ ನಾಯ್ಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಶ್ರೀ ಮಹಾಗಣಪತಿ ಸೇವಾ ಸಮಿತಿಯ ಸಕ್ರಿಯ ಸದಸ್ಯ ಕಲಾ ಪೋಷಕರಾಗಿದ್ದರು.
ಮುನಿಯಾಲು ಆಟೋ ಚಾಲಕ ಸಂಘದ ಕಾರ್ಯದರ್ಶಿ ಸಂತೋಷ್ ನಾಯ್ಕ್ ಯಾಗಿದ್ದರು.

ಮೃತರಿಗೆ ಪತ್ನಿ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ. ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪಡುಕುಡೂರಿನಲ್ಲಿ ಅಂತಿಮ ದರ್ಶನ : ಸಂತೋಷ ನಾಯ್ಕ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಗುರುವಾರ 10 ಗಂಟೆಯ ಹೊತ್ತಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಹಲವಾರು ಮಂದಿ ಅಂತಿಮ ದರ್ಶನ ಪಡೆದರು. ಬಳಿಕ ಮುನಿಯಾಲು ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು, ಮಿತ್ರ ವರ್ಗದವರು ಸೇರಿದಂತೆ ಹಲವರು ಸೇರಿ ಸಂತೋಷ ನಾಯ್ಕ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಮುನಿಯಾಲಿಗೆ ಕೊಂಡೋಯ್ದರು.

Related posts

ಇಂದು ಕುಂದೇಶ್ವರ ಉತ್ಸವ- ನಾಳೆ ಕುಂದೇಶ್ವರ ಪ್ರಶಸ್ತಿ ಪ್ರದಾನ

Madhyama Bimba

ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಅಧ್ಯಕ್ಷರಾಗಿ ಸುನೀತ ಹೆಬ್ಬಾರ್ ಆಯ್ಕೆ

Madhyama Bimba

ಕಾರ್ಕಳ: ಕಾರಿಗೆ ಮೋಟಾರ್ ಸೈಕಲ್ ಡಿಕ್ಕಿ- ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More