ಕಾರ್ಕಳ

ಶಾಂತಿ ಸಾಮರಸ್ಯಕ್ಕೆ ಧಕ್ಕೆ ತರುವ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ- ಸುದೀಪ್ ಶೆಟ್ಟಿ ನಿಟ್ಟೆ ವಿರುದ್ಧ ಪ್ರಕರಣ ದಾಖಲು

ಕಾರ್ಕಳ: ನಿಟ್ಟೆ ಗ್ರಾಮದ ನಿವಾಸಿ ಸುದೀಪ್ ಶೆಟ್ಟಿ ಎಂಬಾತ ತನ್ನ ಸುದೀಪ್ ಶೆಟ್ಟಿ ನಿಟ್ಟೆ ಎಂಬ ಹೆಸರಿರುವ ಫೇಸ್ ಬುಕ್ ಪೇಜ್ ನಲ್ಲಿ ಶಾಂತಿ ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ಹಾಕಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ರುದ್ರೇಶ್ ಎಂಬವರು ಸಾಮಾಜಿಕ ಜಾಲತಾಣವನ್ನು ಪರಿಶೀಲಿಸುತ್ತಿದ್ದಾಗ ಸುದೀಪ್ ಶೆಟ್ಟಿ ನಿಟ್ಟೆ ಎಂಬವರು ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಇರಬೇಕಾದರೆ ಈ ಸೌಹಾರ್ದ ಸಮಿತಿಯವರಿಗೆ ಎಷ್ಟೋ ಕಾರ್ಯಗಳಿವೆ ಅದನ್ನ ಬಿಟ್ಟು ಹಿಂದುಗಳ ಪರ್ಯಾಯ ಮೆರವಣಿಗೆಯಲ್ಲಿ “ಧಫ್ ದುಫ್ ಡಮ್ “ಅಂತ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ… ಅಷ್ಟೊಂದು ಸೌಹಾರ್ದತೆಯ ಕಾಳಜಿ ಇದ್ದಲ್ಲಿ ಲವ್ ಜಿಹಾದ್, ಗೊ ಹತ್ಯೆ, ಭಯೋತ್ಪಾದನೆ, ಹಿಂದೂಗಳ ಮೆರವಣಿಗೆ ಮೆಲೆ ದಾಳಿ ಮಾಡೊದು , ಆಹಾರಕ್ಕೆ ಉಗುಳೊದು, ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡೊದು, ಕಬ್ಜಾ ಮಾಡೊದು, ತಲೆ ಒಡೆಯೊದು, ಕಳ್ಳತನ ಮಾಡೊದು ಸಮಾಜದ ನೆಮ್ಮದಿ ಹಾಳು ಮಾಡೊದು ಇದನ್ನೆಲ್ಲ ಈ ಸೌಹಾರ್ದದವರು ನಿರ್ಮೂಲನೆ ಮಾಡಿ ಸಾಮಾಜಿಕ ಸ್ವಾರಸ್ಯ ಕಾಪಾಡಲಿ …. ಪರ್ಯಾಯದಲ್ಲಿ ಶರಬತ್, ನೀರಿನ ಬಾಟಲಿ ಹಂಚಿದ ಕೂಡಲೆ ಸೌಹಾರ್ದ ಬೆಳೆಯಲ್ಲ, ಇದರಿಂದ ಹಿಂದುಗಳಿಗೆ ನಂಬಿಕೆ ಏನು ನಿಮ್ಮ ಮೇಲೆ ಹೆಚ್ಚಲ್ಲ, ಎಂಬುವುದಾಗಿ ಜಾತಿ, ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಪೋಸ್ಟ್ ಹಾಕಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕುಕ್ಕುಂದೂರಿನ ಪೊಸನೊಟ್ಟಿನಲ್ಲಿರುವ ಕಲ್ಲು ಕಟ್ಟಿಂಗ್ ಫ್ಯಾಕ್ಟರಿಗೆ ಹೋಗುವ ಲಾರಿಯ ಅಬ್ಬರಕ್ಕೆ ಕೊಚ್ಚಿ ಹೋದ ರಸ್ತೆ: ರೊಚ್ಚಿಗೆದ್ದ ಗ್ರಾಮಸ್ಥರು

Madhyama Bimba

ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜು : ಮಾ. ೧ರಂದು ‘ಸ್ನೇಹ ಸೇತು’ ಸಮಾರಂಭ

Madhyama Bimba

ಬೈಲೂರು ಸರಕಾರಿ ಪ.ಪೂ. ಕಾಲೇಜಿಗೆ ಶೇ.97.3 ಫಲಿತಾಂಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More