ಕಾರ್ಕಳ

ಹೆಬ್ರಿ: ಚೈತನ್ಯ ಯುವ ವೃಂದ ವತಿಯಿಂದ ಕ್ರಿಕೆಟ್ ಪಂದ್ಯಾಟ ಚೈತನ್ಯ ಟ್ರೋಫಿ-2026

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೈತನ್ಯ ಯುವ ವೃಂದ ಹೆಬ್ರಿ ಆಶ್ರಯದಲ್ಲಿ ಇತ್ತೀಚಿಗೆ ಅಗಲಿದ ಚೈತನ್ಯ ಯುವ ವೃಂದ ಪೂರ್ವಧ್ಯಕ್ಷ, ನಿರ್ದೇಶಕ ಎಚ್ ರವೀಂದ್ರನಾಥ್ ಬಲ್ಲಾಳ್ ಸ್ಮರಣಾರ್ಥ ಅವಿಭಜಿತ ಕಾರ್ಕಳ ತಾಲೂಕು ಮಟ್ಟದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಚೈತನ್ಯ ಟ್ರೋಫಿ 2026 ಆಯೋಜಿಸಲಾಗಿತ್ತು.


ಈ ಕ್ರೀಡಾಕೂಟದ ಉದ್ಘಾಟನೆಯನ್ನು ಡಾ. ಶರವಿ ಆರ್ ಬಲ್ಲಾಳ್ ರವರು ನೆರವೇರಿಸಿ ನನ್ನ ತಂದೆ ಮತ್ತು ಚೈತನ್ಯ ಯುವ ವೃಂದ ಸಂಬಂಧ ಅಜರಾಮರ ಅವರು ಚೈತನ್ಯ ಜೀವದ ಭಾಗವೆಂದೇ ಭಾವಿಸಿದ್ದರು. ಅವರನ್ನು ಸ್ಮರಿಸುವ ಕ್ರೀಡಾಕಟವನ್ನು ಆಯೋಜಿಸಿದ ಚೈತನ್ಯ ಯುವ ವೃಂದಕ್ಕೆ ತನ್ನ ಕೃತಜ್ಞತೆಗಳನ್ನು ಸಲ್ಲಿಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ಚೈತನ್ಯ ಅಧ್ಯಕ್ಷ ಪ್ರವೀಣ್ ಕುಮಾರ್ ವಹಿಸಿದ್ದರು.

ಅತಿಥಿಗಳಾಗಿ ವೇದಿಕೆಯಲ್ಲಿ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾರನಾಥ ಎಸ್ ಬಂಗೇರ, ಹೆಬ್ರಿ ಉಬಯ ದೇವಳದ ಅನುವಂಶಿಯ ಮೊಕ್ತೇಸರರಾದ ತಾರಾನಾಥ ಬಲ್ಲಾಳ್, ಶ್ರೀಮತಿ ಶಕುಂತಳ ಆರ್ ಬಲ್ಲಾಳ್, ಗೌರವಾಧ್ಯಕ್ಷ ಜನಾರ್ಧನ್ ಎಚ್, ಕಾರ್ಯದರ್ಶಿ ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು.

ಕ್ರೀಡಾ ವಿಭಾಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಚೈತನ್ಯ ಯುವ ವೃಂದದ ಪೂರ್ವಧ್ಯಕ್ಷರುಗಳಾದ ಉಮೇಶ್ ನಾಯಕ್ ಮತ್ತು ಬಾಲಕೃಷ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮತ್ತು ರವೀಂದ್ರನಾಥ್ ಬಲ್ಲಾಳ್‌ರ ಪುತ್ರಿ ವೈದ್ಯಕೀಯ ವ್ಯಾಸಂಗ ಪೂರೈಸಿ ಮಂಗಳೂರು ಎ ಜೆ ವೈದ್ಯಕೀಯ ಕೇಂದ್ರದಲ್ಲಿ ಅರವಳಿಕೆ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಗೌರವಿಸಲಾಯಿತು.


ಕ್ರೀಡಾ ಕಾರ್ಯದರ್ಶಿ ನಿತೀಶ್ ಎಸ್ ಪಿ ಸ್ವಾಗತಿಸಿದರು. ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ನಿರೂಪಿಸಿದರು ಕಾರ್ಯದರ್ಶಿ ರಾಜೇಶ್ ಆಚಾರ್ಯ ಧನ್ಯವಾದ ಸಲ್ಲಿಸಿದರು. ಕೂಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ಒರ್ವ ಹಿರಿಯ ಆಟಗಾರರನ್ನು ಹಿರಿಯ ಕ್ರೀಡಾಪಟು ನೆಲೆಯಲ್ಲಿ ಸನ್ಮಾನಿಸಲಾಯಿತು.

ಬಲ್ಲಾಳ್ ರವರ ಕುಟುಂಬ ಸದಸ್ಯರು ಕ್ರೀಡಾಕೂಟಕ್ಕೆ ಶುಭಹಾರೈಸಿದರು.
ಪಂದ್ಯಾಟದ ಪ್ರಥಮ ಸ್ಥಾನವನ್ನು ಅಜೆಕಾರು ಪ್ರೇಂಡ್ಸ್, ದ್ವಿತೀಯ ಸ್ಥಾನವನ್ನು ಮುನಿಯಲು ಫ್ರೆಂಡ್ಸ್ ಪ್ರಶಸ್ತಿಯನ್ನು ಪಡೆಯಿತು.

 

Related posts

ಕಾರ್ಕಳ ಜೋಡುರಸ್ತೆಯ ದುರ್ಗಾ ಎಲೆಕ್ರ್ಟಾನಿಕ್ಸ್ & ಫರ್ನಿಚರ್ಸ್’ನಲ್ಲಿ ವಿಶೇಷ ಕೊಡುಗೆಗಳು ಲಭ್ಯ-ಪ್ರತಿಯೊಂದು ಖರೀದಿಯ ಮೇಲೆ ವಿಶೇಷ ರಿಯಾಯಿತಿ ಮತ್ತು ಗಿಫ್ಟ್ ಕೂಪನ್

Madhyama Bimba

ಗಾಂಧಿ ಜಯಂತಿ ಪ್ರಯುಕ್ತ ಜ್ಞಾನಸುಧಾ ವಿದ್ಯಾರ್ಥಿಗಳಿಂದ ಸ್ವಚ್ಚತಾ ಅಭಿಯಾನ

Madhyama Bimba

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೋಳ ಪ್ರಾಪ್ತಿ ಎಸ್. ಪೂಜಾರಿಗೆ ಗ್ರ್ಯಾಂಡ್ ಚಾಂಪಿಯನ್ ಶಿಪ್ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More