Blog

ದ್ವೇಷದ ಬರಹ – ನಿಟ್ಟೆಯ ಸುಧಾಕರ ಮೇಲೆ ಕೇಸು ದಾಖಲು

ಐತಿಹಾಸಿಕ ಪರ್ಯಾಯೋತ್ಸವಕ್ಕೆ ಜಿಲ್ಲಾ ಮುಸ್ಲಿಮ್ ಸ್ನೇಹ ಸಮಿತಿಯು ನೀಡಲು ಉದ್ದೇಶಿಸಿರುವ ಹೊರೆಕಾಣಿಕೆಯ ಕುರಿತು ಧರ್ಮ ಧರ್ಮಗಳ  ನಡುವೆ ದ್ವೇಷವನ್ನು ಕದಡುವ  ಬರಹವನ್ನು ಪೋಸ್ಟ್ ಮಾಡಿದ ನಿಟ್ಟೆಯ ಸುಧಾಕರ ಎಂಬವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ನಿಟ್ಟೆ  ಗ್ರಾಮದ ಸುಧಾಕರ (37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುಧಾಕರ ಅಪ್ಪು ನಿಟ್ಟೆ ಎನ್ನುವ ಹೆಸರಿನ ಫೇಸ್ಬುಕ್ ನಲ್ಲಿ ಹಿಂದೂ ಮುಸ್ಲಿಂ ಸಹಾರ್ದತೆಯಿಂದ ಇರಬೇಕಾದರೆ ಈ ಸೌಹಾರ್ದ ಸಮಿತಿಯವರಿಗೆ ಎಷ್ಟೋ ಕೆಲಸಗಳಿವೆ, ಅದನ್ನು ಬಿಟ್ಟು ಹಿಂದುಗಳ ಪರ್ಯಾಯ ಮೆರವಣಿಗೆಯಲ್ಲಿ “ಧಪ್ ದುಪ್ ಢಮ್” ಅಂತ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ. ಪರ್ಯಾಯದಲ್ಲಿ ಶರಭತ್ ನೀರಿನ ಬಾಟಲಿ ಹಂಚಿದ ತಕ್ಷಣ ಸೌಹಾರ್ದ ಬೆಳೆಯಲ್ಲ, ಇದರಿಂದ ಹಿಂದುಗಳ ನಂಬಿಕೆಯನ್ನು ನಿಮ್ಮ ಮೇಲೆ ಹೆಚ್ಚಲ್ಲ ಬಾಕಿದ್ದನ್ನು ಹೇಳಬೇಕಾದವರು ಹೇಳಿದ್ದಾರೆ” ಎಂದು ಬರೆಯಲಾಗಿತ್ತು.

ಧರ್ಮ-ಧರ್ಮ ಜನಾಂಗಗಳ ಮಧ್ಯೆ ಅಪನಂಬಿಕೆ, ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕರ ಸಾಮರಸ್ಯಕ್ಕೆ ತೊಂದರೆ ಉಂಟು ಮಾಡುವ ಬರವಣಿಗೆ ಎಂಬ ಕಾರಣಕ್ಕೆ ಅಪರಾಧ ಕ್ರಮಾಂಕ 01\2026 ಕಲಂ 196(1) , 353(2), 352 ಭಾರತೀಯ ನ್ಯಾಯ ಸಹಿತೆ 2023ರಂತೆ ಪ್ರಕರಣ ದಾಖಲಾಗಿದೆ. ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂದನಕ್ಕೆ ಒಳಪಡಿಸಿದೆ.

Related posts

ದೆಹಲಿಯಲ್ಲಿ ನಡೆಯುವ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ನಲ್ಲಿ ಭಾಗವಹಿಸಲು ಇನ್ನಾ ಮನು ಶೆಟ್ಟಿಗೆ ಅವಕಾಶ

Madhyama Bimba

ಶನಿವಾರ ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿಬಳಗದಿಂದ ಶಿವದೂತ ಗುಳಿಗೆ

Madhyama Bimba

ಕುಚ್ಚುರುನಲ್ಲಿ ಮಳೆ ಹಾನಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More