Blog

ನ್ಯಾಯವಾದಿಗಳ ಮೇಲೆ ಜಾತಿ ನಿಂದನೆ ಕೇಸು – ಪ್ರತಿಭಟನೆ

🌹ವಕೀಲರ ವಿರುದ್ಧ ಜಾತಿ ನಿಂದನೆ ಕೇಸ್ – ವಕೀಲರಿಂದ ಪ್ರತಿಭಟನೆ

🌹ಪುರಸಭೆಯ ಮುಖ್ಯ ಅಧಿಕಾರಿ ಮಹೇಶ್ವರಪ್ಪರನ್ನು ಅಮಾನತ್ತು ಮಾಡುವಂತೆ ಉಪವಿಭಾಗಾಧಿಕಾರಿಗೆ ಮನವಿ

ಸಕಲೇಶಪುರ:- ನಗರದ ವಕೀಲರಾದ ಅಭಿಜ್ಞಾನ್ ಎಂಬುವರ ಮೇಲೆ ಪುರಸಭೆಯ ಮುಖ್ಯ ಅಧಿಕಾರಿಯಾದ ಪರಮೇಶ್ವರಪ್ಪ ರವರು ಸುಳ್ಳು ಜಾತಿನಿಂದನೇ ಕೇಸನ್ನು ದಾಖಲಿಸಿರುವ ವಿರುದ್ಧ ಇಂದು ವಕೀಲರು ನ್ಯಾಯಾಲಯದ ಕಾರ್ಯಕಲಾಪದಿಂದ ದೂರ ಉಳಿದು ನಗರದ ಬಿ.ಎಮ್.ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಉಪ ವಿಭಾಗಾಧಿಕಾರಿಗಳಿಗೆ ಪುರಸಭೆಯ ಮುಖ್ಯ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಮನವಿ ಸಲ್ಲಿಸಲಾಯಿತು.

ವಕೀಲರಾದ ಅಭಿಜ್ಞಾನ್ ರವರು ತಮ್ಮ ಕುಟುಂಬಕ್ಕೆ ಸೇರಿದ ಕೆಲವೊಂದು ಆಸ್ತಿಗಳನ್ನು ಮಾನ್ಯ ರಾಜ್ಯ ಹೈಕೋರ್ಟಿನ ನ್ಯಾಯಾಲಯದ ಆದೇಶದಂತೆ ತಮ್ಮ ಸ್ವತ್ತಿಗೆ ಖಾತೆ ಮಾಡಿಕೊಡುವಂತೆ ಅರ್ಜಿಯನ್ನು ಸಲ್ಲಿಸಿ ಹಲವು ತಿಂಗಳುಗಳೆ ಕಳೆದಿದ್ದರೂ ಖಾತೆಯನ್ನು ಮಾಡಿಕೊಡದೆ ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದರು. ಅಲ್ಲದೆ ಲಂಚದ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದರು ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪುರಸಭೆಯ ಮುಖ್ಯ ಅಧಿಕಾರಿಗಳು ಖಾತೆಯನ್ನು ಮಾಡಿಕೊಡದೆ ಉಡಾಫೆತನವನ್ನು ತೋರುತ್ತಿದ್ದರು. ಈ ಸಂಬಂಧ ವಕೀಲರಾದ ಅಭಿಜ್ಞಾನ ರವರು ಸೂಕ್ತ ದಾಖಲಾತಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ನ್ಯಾಯಕ್ಕಾಗಿ ಸತ್ಯಾಗ್ರಹ ಕೂತಿದ್ದನ್ನು ತಿಳಿದ ಪುರಸಭೆಯ ಮುಖ್ಯ ಅಧಿಕಾರಿ ಪರಮೇಶ್ವರಪ್ಪ ರವರು ಹೀಗೆಲ್ಲಾ ನೀನು ನನಗೆ ತೊಂದರೆ ಕೊಡುತ್ತಿದ್ದೀಯಾ ಎಂದು ನಿನ್ನ ಮೇಲೆ ಅಟ್ರಾಸಿಟಿ ಕೇಸ್ ಅನ್ನು ದಾಖಲೆ ಮಾಡುತ್ತೇನೆ ಎಂದು ಹೆದರಿಸಿದ್ದರು. ಅದರಂತೆ ಪುರಸಭೆಯ ಮುಖ್ಯ ಅಧಿಕಾರಿಗಳು ವಕೀಲರಾದ ಅಭಿಜ್ಞಾನ್ ಮತ್ತು ನ್ಯಾಯಕ್ಕಾಗಿ ಸಹಕರಿಸಿದ ಪ್ರೀತಮ್ ಎಂಬುವರ ಮೇಲೆ ಜಾತಿನಿಂದಲೇ ಕೇಸ್ ಅನ್ನು ದಾಖಲಿಸಿರುತ್ತಾರೆ. ಸುಳ್ಳು ಕೇಸನ್ನು ದಾಖಲು ಮಾಡಿರುವ ವಿಷಯವನ್ನು ವಕೀಲರಾದ ಅಭಿಜ್ಞಾನ್ ರವರು ವಕೀಲರ ಸಂಘಕ್ಕೆ ತಿಳಿಸಲಾಗಿ, ಇಂದು ವಕೀಲರ ಸಂಘವು ಒಂದು ನಿರ್ಣಯವನ್ನು ಕೈಗೊಂಡು ನ್ಯಾಯ ದಾನ ಒದಗಿಸುವ ವಕೀಲರಿಗೆ ಈ ರೀತಿ ಪರಿಸ್ಥಿತಿ ಉಂಟಾದರೆ, ಸಾರ್ವಜನಿಕರ ಸ್ಥಿತಿ ಏನು ಎಂಬುದನ್ನು ಮನವರಿತು ವಕೀಲರ ಸಂಘದ ನಿರ್ಣಯದಂತೆ ನ್ಯಾಯಾಲಯದ ಕಾರ್ಯಕಲಾಪದಿಂದ ಹೊರಗುಳಿದು ಸುಳ್ಳು ಕೇಸನ್ನು ದಾಖಲು ಮಾಡಿರುವ ಪುರಸಭೆಯ ಮುಖ್ಯ ಅಧಿಕಾರಿ ಪರಮೇಶ್ವರಪ್ಪರವರನ್ನು ಕೂಡಲೆ ಅಮಾನತ್ತು ಮಾಡುವಂತೆ, ಹಾಗೆಯೇ ಭ್ರಷ್ಟ ಅಧಿಕಾರಿಯಾದ ಅವರ ಮೇಲೆ ಕ್ರಮ ಕೈಗೊಂಡು ಅವರನ್ನು ಈ ಸ್ಥಳದಿಂದ ವರ್ಗಾವಣೆ ಮಾಡುವಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಾನ್ಯ ಉಪ ವಿಭಾಗಾಧಿಕಾರಿಗಳಾದ ಮಂಜುನಾಥ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಯಶವಂತರವರು ಮಾತನಾಡಿ ಭ್ರಷ್ಟ ಅಧಿಕಾರಿ ಪರಮೇಶ್ವರಪ್ಪ ಪುರಸಭೆಯ ಕೆಲಸ ಕಾರ್ಯಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದಲ್ಲದೆ ಲಂಚಕ್ಕೆ ಬೇಡಿಕೆ ಇಡುವುದಲ್ಲದೆ ವಕೀಲರ ಮೇಲೆ ಸುಳ್ಳು ಜಾತಿನಿಂದನೆ ಕೇಸ್ ಅನ್ನು ದಾಖಲೆ ಮಾಡಿರುವುದಕ್ಕೆ ಕೂಡಲೇ ಅವರನ್ನು ಅಮಾನತ್ತು ಪಡಿಸಬೇಕು ಎಂದು ತಿಳಿಸುತ್ತಾ, ಇದಕ್ಕೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಮತ್ತು ರಾಜ್ಯ ವಕೀಲರ ಸಂಘದ ಮೂಲಕ ತೀವ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದೆಂದು ಹೇಳಿದರು. ಮತ್ತೊಬ್ಬ ವಕೀಲರಾದ ವೇಣುರವರು ಮಾತನಾಡುತ್ತ ಅಟ್ರಾಸಿಟಿ ಕೇಸ್ ಅನ್ನು ದುರುಪಯೋಗ ಪಡಿಸಿಕೊಳ್ಳುವುದರಿಂದ ನಿಷ್ಠಾವಂತರಿಗೆ ತೊಂದರೆಯಾಗುತ್ತದೆ ಆದ್ದರಿಂದ ಇಂಥ ಭ್ರಷ್ಟ ಅಧಿಕಾರಿಯ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಯಶವಂತ್ ಕುಮಾರ್ ಕಾರ್ಯದರ್ಶಿ ಶ್ರೀಮತಿ ವಾಣಿ ಜಂಟಿ ಸಹಕಾರ್ಯದರ್ಶಿಗಳಾದ ವಿನಯ್ ಮತ್ತು ಎ.ಪಿ. ಮಹೇಶ್ ಖಜಾಂಚಿಯಾದ ಪದ್ಮನಾಭ ಹಿರಿಯ ವಕೀಲರುಗಳಾದ ಆರ್.ಎನ್.ಕೃಷ್ಣಮೂರ್ತಿ, ಎಂ.ಎಸ್.ಮಲ್ಲೇಶ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕಿರಿಯ ವಕೀಲರುಗಳು ಭಾಗಿಯಾಗಿದ್ದರು.

Related posts

ಇನ್ನೋವಾ ಅಪಘಾತ

Madhyama Bimba

ಸಂಕಷ್ಟದಲ್ಲಿ ಬೆಳೆಗಾರರು

Madhyama Bimba

ಕಾಂತಾವರ ಶಾಲೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More