ಕಾರ್ಕಳ

ರೋಟರಿಯಿಂದ ಹೊಸ ವರ್ಷಾಚರಣೆ ಮತ್ತು ವಿವಿಧ ವೃತ್ತಿ ಸಾಧಕರಿಗೆ ಸನ್ಮಾನ

ಅಂತರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿಯಲ್ಲಿ ಜನವರಿ ತಿಂಗಳನ್ನು ‘ವೃತ್ತಿ ಸೇವಾ ಮಾಸಾಚಾರಣೆ’ಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಂತೆಯೇ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಂಸ್ಥೆಯವರಿಂದ ಕಾರ್ಕಳದ ವಿವಿಧ ಕ್ಷೇತ್ರಗಳಲ್ಲಿನ ಬೇರೆ ಬೇರೆ ವೃತ್ತಿಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ 9 ಜನರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.


ಡಾ. ಟಿ ಎಮ್ ಎ ಪೈ ರೋಟರಿ ಆಸ್ಪತ್ರೆಯ ವಠಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಸೇನೆಯಿಂದ ನಿವೃತ್ತಗೊಂಡ ಸುಭೇದಾರ್ ಪ್ರವೀಣ್ ಶೆಟ್ಟಿ, ಸೈಕಲ್ ರಿಪೇರಿ ವೃತ್ತಿ ಮಾಡುತ್ತಿರುವ ಕೆ. ಸದಾನಂದ, ಗ್ಯಾಸ್ ವೆಲ್ಡರ್ ಸುರೇಂದ್ರ ಎಸ್, ಆಟೋ ರಿಕ್ಷಾ ಚಾಲಕ ದಾಮೋದರ, ಕ್ಷಾರಿಕ ವೃತ್ತಿಯನ್ನು ಮಾಡುತ್ತಿರುವ ಸತೀಶ ಸುವರ್ಣ, ಕಾರ್ಪೆಂಟರ್ ಪ್ರಸಾದ ಆಚಾರ್ಯ ಹಾಗೂ ಆಸ್ಪತ್ರೆಯ ಸಿಬ್ಬಂದಿ ಶ್ರೀಮತಿ ಪ್ರೇಮ, ಶುಶ್ರೂಷಕಿ ಲೂವಿಜಾ ತೌರೋ ಮತ್ತು ಶಂಕರ ದೇವಾಡಿಗ ಇವರುಗಳನ್ನು ಸನ್ಮಾನಿಸಲಾಯಿತು. ತದನಂತರ ಆಸ್ಪತ್ರೆಯ ಸಿಬ್ಬಂದಿಗಳಿಂದ ಹಾಗೂ ರೋಟರಿಯ ಕುಟುಂಬದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವೈದ್ಯರಾದ ಕೇಶವ್ ರವರಿಂದ ಮಿಮಿಕ್ರಿ ಬಹಳ ಆಕರ್ಷಣೆಯಾಗಿತ್ತು. ಸಂಸ್ಥೆಯ ಸದಸ್ಯ ವಲಯ ಸೇನಾನಿ ರೋ. ಪ್ರಶಾಂತ್ ಬಿಳಿರಾಯ ಮತ್ತು ವಾಣಿ ದಂಪತಿಗಳ ಸುಪುತ್ರ ಪ್ರಜ್ವಲ್ ಬಿಳಿರಾಯ, ಭಾವನಾ ನವದಂಪತಿಗಳು ಸಭೆಯ ಮುಂದೆ ಹಾರ ಬದಲಾಯಿಸಿಕೊಂಡರು.


ರೋಟರಿ ಅಧ್ಯಕ್ಷ ರೋ. ಸುರೇಂದ್ರ ನಾಯಕ್ ಸ್ವಾಗತಿಸಿದರು.
ಆಸ್ಪತ್ರೆ ಸಿಬ್ಬಂದಿಯವರೊಂದಿಗೆ ಉತ್ತಮ ಬಾಂಧವ್ಯ
ವನ್ನಿಟ್ಟುಕೊಂಡು ಇಂತಹ ಕಾರ್ಯಕ್ರಮವನ್ನು ಬಹಳ ಉತ್ತಮ ರೀತಿಯಾಗಿ ನಡೆಸಿ ಕೊಟ್ಟ ರೋಟರಿ ಸಂಸ್ಥೆಯವರ ಕಾರ್ಯವನ್ನು ವೈಧ್ಯಾಧಿಕಾರಿ ಡಾ. ಕೀರ್ತಿನಾಥ ಬಳ್ಳಾಲರು ಪ್ರಶಂಸಿದರು.

ರೋಟರಿ ಮಾರ್ಗದರ್ಶಕರು ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್ ರವರು ಮಾತನಾಡುತ್ತಾ ರೋಟರಿಯಲ್ಲಿ ಜನವರಿ ತಿಂಗಳನ್ನು ವೃತ್ತಿ ಸೇವಾ ಮಾಸಾಚರಣೆಯನ್ನಾಗಿ ಆಚರಿಸುತ್ತಿದ್ದು ಸ್ಥಳೀಯ ವಿವಿಧ ಕ್ಷೇತ್ರಗಳಲ್ಲಿನ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನ ಮಾಡಿರುವುದು ನಿಜಕ್ಕೂ ಒಳ್ಳೆಯ ಕೆಲಸ ಸನ್ಮಾನಗೊಂಡವರು ಇತರರಿಗೆ ಮಾದರಿಯಾಗಿರಲಿ ಅವರ ಜೀವನ ಫಲಪ್ರದವಾಗಲಿ ಎಂದು ಹಾರೈಸಿದರು.

ವೃತ್ತಿ ಸೇವಾ ಸಭಾಪತಿ ನಿವೃತ್ತ ಪ್ರಾಂಶುಪಾಲರಾದ ರೋ. ಗಣೇಶ್ ಬರ್ಲಾಯ ಮತ್ತು ಆನ್ಸ್ ಅಧ್ಯಕ್ಷೆ ಶ್ರೀಮತಿ ಶರ್ಮಿಳಾ ರಮೇಶ್ ಶೆಟ್ಟಿಯವರು ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ರೋ. ಸುಬ್ರಮಣ್ಯ ಉಪಾಧ್ಯರವರು ನೆರವೇರಿಸಿದರು. ಆಸ್ಪತ್ರೆ ವೈದ್ಯರು, ಸಿಬ್ಬಂದಿಯವರು, ರೋಟರಿ ಸದಸ್ಯರು ಹಾಗೂ ಆಹ್ವಾನಿತರು ಉಪಸ್ಥಿತರಿದ್ದರು.

Related posts

ಕಾರ್ಕಳ: ಕುಕ್ಕುಂದೂರು ಬಳಿ ಪಾದಚಾರಿಗೆ ಕಾರು ಡಿಕ್ಕಿ- ಪಾದಚಾರಿ ಮೃತ್ಯು

Madhyama Bimba

ನಿಟ್ಟೆ ಡಾ. ವಿನಯ ಹೆಗ್ಡೆ ಅಗಲುವಿಕೆಗೆ ಉದಯ ಶೆಟ್ಟಿ ಮುನಿಯಾಲು ತೀವ್ರ ಸಂತಾಪ

Madhyama Bimba

ಸಾಣೂರು ಯುವಕ ಮಂಡಲ ವಾರ್ಷಿಕೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More