ಕಾರ್ಕಳ

ಜ. 14ರಿಂದ 16: ಕಾರ್ಕಳ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನದಲ್ಲಿ ವರ್ಧಂತ್ಯುತ್ಸವ

ಕಾರ್ಕಳ: ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನದಲ್ಲಿ 41 ವರ್ಧಂತ್ಯುತ್ಸವವು ಜ. 14ರಂದು ಆರಂಭಗೊಂಡು ಜ. 16ರವರೆಗೆ ನಡೆಯಲಿದೆ.


ಜ. 14ರಂದು ಗಣಹೋಮ, ನವಕ ಪ್ರಧಾನ ಹೋಮ, ಮಧ್ಯಾಹ್ನ ಮಹಾಪೂಜೆ, ಶ್ರೀ ನಾಗದೇವರಿಗೆ ಆಶ್ಲೇಷಾ ಬಲಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಸಂಕ್ರಮಣ ಪೂಜೆ, ದೇವಿ ದರ್ಶನ, ರಂಗಪೂಜೆ ನಡೆಯಲಿದೆ.

ಜ. 15ರಂದು ಮಧ್ಯಾಹ್ನ 12.00 ಗಂಟೆಗೆ ಚಂಡಿಕಾಯಾಗ, ಶ್ರೀ ಕಾಳಿಸಹಸ್ರನಾಮಯಾಗ ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7.00ಗಂಟೆಯಿಂದ ಧಾರ್ಮಿಕಸಭೆ, ನಂತರ ಸೇವಾ ಸಮಿತಿ ಮತ್ತು ಮಹಿಳಾ ಮಂಡಳಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಜ. 16ರಂದು ಮಧ್ಯಾಹ್ನ ಮಹಾಪೂಜೆ, ದೇವಿದರ್ಶನ, ಅನ್ನಸಂತರ್ಪಣೆ, ರಾತ್ರಿ 7.00 ಗಂಟೆಯಿಂದ ಶ್ರೀ ಮಹಾಂಕಾಳಿ ಯಕ್ಷಗಾನ ಕಲಾಮಂಡಳಿ ಪತ್ತೊಂಜಿಕಟ್ಟೆ ಕಾರ್ಕಳ ಇವರಿಂದ ‘ಮಹಿಷ ವಧೆ’ ಯಕ್ಷಗಾನ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮೊಕ್ತೇಸರರಾದ ಕೆ. ದಿವಾಕರ ಶೆಟ್ಟಿ ತಿಳಿಸಿದ್ದಾರೆ.

Related posts

ದೇಹದಾರ್ಡ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ: ಮುದ್ರಾಡಿಯ ನೈದಿಲ್ ಪೂಜಾರಿ ಅವರಿಗೆ ಸನ್ಮಾನ

Madhyama Bimba

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :ರಜತ ವರ್ಷದ ಲಾಂಛನ ಬಿಡುಗಡೆ

Madhyama Bimba

ಕಾರ್ಕಳದ ತೆಳ್ಳಾರು ರಸ್ತೆಯ ಬಳಿ ಪಾದಚಾರಿಗೆ ಬೈಕ್ ಡಿಕ್ಕಿ: ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More