Blog

ಕುಖ್ಯಾತ ಚಿನ್ನ ಕಳ್ಳ ಪೊಲೀಸ್ ಬಲೆಗೆ


ದಕ್ಷಿಣ ಭಾರತದ ಕುಖ್ಯಾತ ಕಳ್ಳ ಉಮೇಶ್ ಬಳೆಗಾರ @ ಉಮೇಶ್ ರೆಡ್ಡಿ ಪೊಲೀಸ್ ಕಸ್ಟಡಿಗೆ, ಕಳ್ಳತನ ಮಾಡಿದ 55 ಗ್ರಾಂ ತೂಕದ ಚಿನ್ನ ವಶಕ್ಕೆ.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಮನೆ ಕಳ್ಳತನ ಮಾಡಿ ತಲೆಮಾರಿಸಿಕೊಂಡಿದ್ದ ಕುಖ್ಯಾತ ಕಳ್ಳ ಉಮೇಶ @ ಉಮೇಶ ಬಳೆಗಾರ @ ಉಮೇಶ ರೆಡ್ಡಿ ಎಂಬಾತನನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಶ್ರೀ ಹರಿರಾಮ್ ಶಂಕರ್ ರವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ಎಸ್ ನಾಯಕ್, ಕಾರ್ಕಳ ಉಪ ವಿಭಾಗದ ಪ್ರಭಾರ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ ಪ್ರಭು ಡಿ ಟಿ ರವರ ಮಾರ್ಗದರ್ಶನದಂತೆ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಮತ್ತು ಅವರ ನೇತೃತ್ವದ ಅಪರಾಧ ಪತ್ತೆದಳ ದಿನಾಂಕ 02/01/2026 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜಪಡಿಸಿದೆ.

ಬಳಿಕ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಬಗ್ಗೆ ಪೊಲೀಸ್ ಕಷ್ಟಡಿಗೆ ಪಡೆದು ವಿಚಾರಿಸಿದ್ದಲ್ಲಿ ಆರೋಪಿಯು ತಾನು ದಿನಾಂಕ 04/12/2025 ರಂದು ಕಾಪು ತಾಲೂಕು ಮಲ್ಲಾರು ಗ್ರಾಮದ ಕಾಪು ಮುಖ್ಯ ರಸ್ತೆಯಲ್ಲಿರುವ ರಾಘವೇಂದ್ರ ಕಿಣಿ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ತಮಿಳುನಾಡು ರಾಜ್ಯದ ಮಧುರೈ ಎಂಬಲ್ಲಿ ಮಾರಾಟ ಮಾಡಿರುವುದಾಗಿ ತಪೊಪ್ಪಿಕೊಂಡಿದ್ದಾನೆ.

ಅದರಂತೆ ಪ್ರಕರಣದ ತನಿಖಾಧಿಕಾರಿ ಕಾಪು ಪೋಲಿಸ್ ವೃತ್ತ ನಿರೀಕ್ಷಕರಾದ ಶ್ರೀ ಅಜ್ಮತ್ ಆಲಿ ರವರು ಅಪರಾಧ ಪತ್ತೆದಳದ ಸಿಬ್ಬಂದಿಯವರೊಂದಿಗೆ ಆರೋಪಿ ಉಮೇಶ್ ಬಳೆಗಾರ ನನ್ನು ಕರೆದುಕೊಂಡು ತಮಿಳುನಾಡು ರಾಜ್ಯದ ಮಧುರೈ ಗೆ  ತೆರಳಿ ಆರೋಪಿಯು ಕಳವು ಮಾಡಿದ  ಚಿನ್ನಾಭರಣಗಳನ್ನು ಮಾರಾಟ ಮಾಡಿದ ಚಿನ್ನದ ಅಂಗಡಿಯನ್ನು ಪತ್ತೆ ಹಚ್ಚಿ ಅಂಗಡಿಯ ಮಾಲಕರಿಂದ 55 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಸ್ವಾದಿನಪಡಿಸಿಕೊಂಡಿರುತ್ತಾರೆ.

ಸದರಿ ಪ್ರಕರಣದಲ್ಲಿ ಆರೋಪಿ ದಸ್ತಗಿರಿ ಮತ್ತು ಸ್ವತ್ತು ಸ್ವಾದಿನತಾ ಕಾರ್ಯದಲ್ಲಿ ಕಾಪು ಪೊಲೀಸ್ ಠಾಣಾ  ಅಪರಾಧ ಪತ್ತೆ ವಿಭಾಗದ ಪಿಎಸ್ಐ ಶುಭಕರ, ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ ಐ ಅನಿಲ್ ಟಿ ನಾಯಕ್, ಎ ಎಸ್ ಐ ರಾಜೇಶ್ ಪಿ, ಕಾರ್ಕಳ ಗ್ರಾಮಾಂತರ ಠಾಣಾ ಎ ಎಸ್ ಐ ಪ್ರಕಾಶ್, ಶಿರ್ವ ಪೊಲೀಸ್ ಠಾಣಾ ಎಚ್ ಸಿ ಕಿಶೋರ್ , ಕಾಪು ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಹೆಚ್ ಸಿ  ರಿಯಾಜ್, ಪಿ ಸಿ ಶರಣಪ್ಪ, ಜೀವನ್ ಕುಮಾರ್, ದಿನೇಶ್ ಕುಮಾರ್, ಮಹಿಳಾ ಪಿ ಸಿ ಪಾವನಾಂಗಿ ಡಿ ಹೆಚ್, ಕಾಪು ಪೊಲೀಸ್ ಠಾಣಾ ಸಿಬ್ಬಂದಿ ಮೋಹನ್ ಚಂದ್ರ, ರಾಘು, ಮತ್ತು ಕಾಪು ವೃತ್ತ ನಿರೀಕ್ಷಕರ ಜೀಪು ಚಾಲಕ ಜಗದೀಶ್ ರವರು ಸಹಕರಿಸಿರುತ್ತಾರೆ.


ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ನಿತಿನ್, ಜಿಲ್ಲಾ ಬೆರಳು ಮುದ್ರೆ ಘಟಕದ ತಜ್ಞೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ಎಲ್ ಮೋಹನ ಕುಮಾರಿ ಹಾಗೂ ಅವರ ಸಿಬ್ಬಂದಿರವರು ಸಹಕರಿಸುತ್ತಾರೆ.

Related posts

ನವಮಿ ಟ್ರಾವೆಲ್ಸ್ ಲಕ್ಷ್ಮಣ್ ಇನ್ನಿಲ್ಲ

Madhyama Bimba

ಪದ್ಮನಾಭ ಭಟ್ ಮುನಿಯಾಲು ನಿಧನ

Madhyama Bimba

ಭಾನುವಾರ ಜನನಿ ಮ್ಯಾರಥಾನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More