ಕಾರ್ಕಳಹೆಬ್ರಿ

ಆನ್‌ಲೈನ್ ವಂಚನೆ: ರೂ 2,19,500 ಕಳೆದುಕೊಂಡ ನಾಡ್ಪಾಲಿನ ವ್ಯಕ್ತಿ

ಹೆಬ್ರಿ: ಆನ್‌ಲೈನ್ ವಂಚನೆಯಿಂದ ವ್ಯಕ್ತಿಯೋರ್ವರು ರೂ. 2,19,500 ಕಳೆದುಕೊಂಡ ಘಟನೆ ವರದಿಯಾಗಿದೆ.


ನಾಡ್ಪಾಲು ಗ್ರಾಮದ ರಮೇಶ (32) ಹಣ ಕಳೆದುಕೊಂಡವರು.

ರಮೇಶರವರಿಗೆ ಜ. 02ರಂದು ರವಿ ಕುಮಾರ್ ಎಸ್ ಎಂಬ ವ್ಯಕ್ತಿ ಪೋನ್ ಮಾಡಿ ಬಜಾಜ್ ಪೈನಾನ್ಸ್‌ನಿಂದ ಮಾತನಾಡುವುದು ನಾವು ಆನ್‌ಲೈನ್‌ನಲ್ಲಿ ಲೋನ್ ಕೋಡುತ್ತೇವೆ ಎಂದು ನಂಬಿಕೆ ಬರುವಂತೆ ಮಾತನಾಡಿ, ರಮೇಶರವರು ತನ್ನ ತಂಗಿ ಮದುವೆ ಇದ್ದು ಹಣದ ಅಗತ್ಯವಿದ್ದುದರಿಂದ ಬಡ್ಡಿ ಎಷ್ಟು ಎಂದು ಕೇಳಿದಾಗ 3 ಶೇಕಡಾ   ಎಂದು ಹೇಳಿದ್ದು 5 ವರ್ಷಕ್ಕೆ ಪ್ರತಿ ತಿಂಗಳು 6289.00 ರೂ ಹಣ ಕಟ್ಟಲಿಕ್ಕೆ ಬರುತ್ತದೆ ಎಂಬುದಾಗಿ ನಂಬಿಸಿ, ಬೇರೆ ಬೇರೆ ಕಾರಣ ಹೇಳಿ ಜ. 02ರಿಂದ ಜ. 05ರವರೆಗೆ ಹಂತ ಹಂತವಾಗಿ ಒಟ್ಟು 36 ಟ್ರಾಜೆಂಕ್ಷನ್ ಮೂಲಕ ಒಟ್ಟು 2,19,500 ರೂ ಹಣವನ್ನು ಹಾಕಿಸಿಕೊಂಡಿರುತ್ತಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕಾರ್ಕಳ: ಕೆಸರುಗದ್ದೆಗೆ ಬಿದ್ದು ಉಸಿರುಗಟ್ಟಿ ವ್ಯಕ್ತಿ ಮೃತ್ಯು

Madhyama Bimba

ದಿ. ಸಂತೋಷ್ ನಾಯ್ಕ್‌ರಿಗೆ ನುಡಿನಮನ ಕಾರ್ಯಕ್ರಮ

Madhyama Bimba

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನಿಂದ ಸ್ವಚ್ಛತಾ ಅಭಿಯಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More