Blog

ಮುನಿಯಾಲು ಕಾಡುಹೊಳೆ: ಸುಧಣ್ಣಾಸ್ ರಿವರ್‌ವ್ಯೂ ಗಾರ್ಡನ್ ಲೋಕರ್ಪಾಣೆ


ಮುನಿಯಾಲು ಕಾಡುಹೊಳೆಯಲ್ಲಿ ಸುಧಣ್ಣಾಸ್ ರಿವರ್‌ವ್ಯೂ ಗಾರ್ಡನ್ ಓಪನ್ ಹಾಲ್ ಜ. ೩೦ ರಂದು ಲೋಕಾರ್ಪಣೆಗೊಂಡಿತು.

ಮುಂಬಯಿ ಉದ್ಯಮಿ ಶಿವರಾಮ ಜಿ. ಶೆಟ್ಟಿ ದೇವಸ್ಯ ಅಜೆಕಾರು ನೂತನ ಉದ್ಯಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಕೃತಿ ಸೌಂದರ್ಯದ ನಡುವೆ ಜನರ ಅಭಿರುಚಿಗೆ ತಕ್ಕ ಹಾಗೆ ಓಪನ್ ಹಾಲ್ ನಿರ್ಮಾನಗೊಂಡಿದೆ. ಜನರು ಹೊಸತನದ ಕಡೆಗೆ ಹೋಗುವಾಗ ಇಂತಹ ಯೋಜನೆಗಳು ಆರಂಭವಾದಗ ಗ್ರಾಮೀಣ ಭಾಗದ ಜನರು ಇದನ್ನು ಸ್ವೀಕರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಉದ್ಯಮ ಆರಂಭಿಸುವುದು ಕಷ್ಟಸಾಧ್ಯ ಆದರೆ ಪಾಲುದಾರರಾದ ಸುಜಯ ಶೆಟ್ಟಿ ಗುರುಪ್ರಸಾದ್ ಶೆಟ್ಟಿಯವರು ಗ್ರಾಮೀಣ ಭಾಗದಲ್ಲಿ ಹಲವು ಉದ್ದಿಮೆಗಳನ್ನು ಆರಂಭಿಸಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್.ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ವಹಿಸಿ ಮಾತನಾಡಿ ಊರು ಅಭಿವೃದ್ಧಿಗೊಂಡಾಗ ಎಲ್ಲರೂ ಸಂತೋಷ ಪಡುತ್ತಾರೆ. ಯಶಸ್ಸಿನ ಹಿಂದೆ ಕಠೀಣ ಪರಿಶ್ರಮ ಅಗತ್ಯ ಅವಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.
ಅಜೆಕಾರು ಪವಿತ್ರ ಹೃದಯದ ಇಗರ್ಜಿಯ ಧರ್ಮಗುರುಗಳಾದ ರೆ| ಫಾ| ಹೆನ್ರಿ ಮಸ್ಕರೇನ್ಹಸ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿ, ದೇವರ ಅನುಗ್ರಹದಿಂದ ಉದ್ಯಮ ಯಶಸ್ಸುಗೊಳ್ಳಲು ಸಾಧ್ಯ. ಈ ಉದ್ಯಮವು ಕೇವಲ ಕಟ್ಟಡಗಳಿಂದ ಕೂಡಿರದೇ ಕುಟುಂಬಗಳನ್ನು ಬೆಸೆಯುವ ತಾಣವಾಗಲಿ ಎಂದರು.
ಮುನಿಯಾಲು ಆಯುರ್ವೇದ ಕಾಲೇಜು ಮಣಿಪಾಲ ಅಧ್ಯಕ್ಷ ವಿಜಯಭಾನು ಶೆಟ್ಟಿ, ಉದ್ಯಮಿ ದಿನೇಶ್ ಪೈ ಮುನಿಯಾಲು, ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮುಂಬಯಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಹರೀಶ್ ಶೆಟ್ಟಿ, ಬೈರಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿಯಾನಂದ ಹೆಗ್ಡೆ, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್, ಕಟಪಾಡಿ ಪ್ರಜ್ವಲ್ ಕನ್‌ಸ್ಟ್ರಕ್ಷನ್‌ನ ದಯಾನಂದ ಶೆಟ್ಟಿ, ಮಂಗಳೂರು ಇಂಡಸ್ಟ್ರಿಯಲ್ ಸೊಲ್ಯೂಷನ್‌ನ ಯತ್ನಿಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅಡುಗೆ ತಜ್ಞ ಬಿಲ್ಲಾಡಿ ಕುಂದಾಪುರದ ಶೀನ ಕುಲಾಲ್‌ರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಪ್ರವರ್ತಕರಾದ ಗುರುಪ್ರಸಾದ್ ಶೆಟಿ ಸ್ವಾಗತಿಸಿ ಸುಜಯ ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ಕಾರ್ಯಕ್ರಮ ಹಾಗೂ ಕಾಪು ರಂತರಂಗ ಕಲಾವಿದರಿಂದ ಶೋಬಾಜಿ ನಾಟಕ ಪ್ರದರ್ಶನಗೊಂಡಿತು.

Related posts

ಹರಿದಾಸ ಬಿ ಸಿ ರಾವ್ ಶಿವಪುರರ ಮನೆಗೆ ಭೇಟಿ ನೀಡಿದ ಕೇಮಾರು ಸ್ವಾಮೀಜಿ

Madhyama Bimba

ಶಗುನ್ ಎಸ್ ವರ್ಮ ಹೆಗ್ಡೆಯವರಿಗೆ ಕಾರ್ಕಳ ಜೈನ ಮಠದಿಂದ ಸನ್ಮಾನ

Madhyama Bimba

ನಿಧನ  – ಮುನಿಯಾಲು ಜಲಜ ಭಂಡಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More