ಕಾರ್ಕಳ

ರಂಗನಪಲ್ಕೆಯ ಡಾ|ಬಿ.ಆರ್.ಅಂಬೇಡ್ಕರ್ ರಸ್ತೆ ಡಾಮಾರೀಕರಣ ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಅಭಿನಂದನೆ: ಅಂತೋನಿ ಮಿರಾಂದಾ

ರಂಗನಪಲ್ಕೆ ಕರಿಕುಮೇರಿ ಪಾತಾವಿನ ಸಂಪರ್ಕ ರಸ್ತೆಯಾದ ಡಾ| ಬಿ.ಆರ್. ಅಂಬೇಡ್ಕರ್ ರಸ್ತೆ ಕಳೆದ ಹಲವು ವರ್ಷಗಳಿಂದಲೂ ತೀವ್ರ ಹದಗೆಟ್ಟಿರುವುದು ಮಾತ್ರವಲ್ಲದೆ ಅಭಿವೃದ್ಧಿಯಾಗದೆ ಇರುವುದು ಪಂಚಾಯತ್ ಸದಸ್ಯರ ನಿರ್ಲಕ್ಷವೇ ಕಾರಣವಾಗಿದೆ.

ಕಳೆದ ಒಂದು ವರ್ಷದ ಹಿಂದೆ ಈ ರಸ್ತೆಯಲ್ಲಿ ಪ್ರತಿಭಟನೆ, ಧರಣಿ ಮಾಡಿದರೂ ಬೈಲೂರು-ಕೌಡೂರು ಪಂಚಾಯತಿನ ಯಾವ ಸದಸ್ಯರು ಸ್ಪಂದಿಸಿಲ್ಲ. ಅದೇ ವೇಳೆಗೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ರವರು ಸ್ಥಳಕ್ಕೆ ಬಂದು ಧರಣಿ ಮಾಡುವ ಗ್ರಾಮಸ್ಥರಿಗೆ ಭರವಸೆ ಕೊಟ್ಟರು ಮಾತ್ರವಲ್ಲದೆ ನಿರ್ವಹಿಸಿದರು. ಸ್ಥಳದಲ್ಲಿಯೇ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿರನ್ನು ಸಂಪರ್ಕಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಸಂಪರ್ಕಿಸಿ ರಸ್ತೆಯ ಬಗ್ಗೆ ಗಮನ ಸೆಳೆಯುವಂತೆ ಮಾಡಿದರು.

ತೀವ್ರ ಹದಗೆಟ್ಟ ಈ ರಸ್ತೆಯಲ್ಲಿ ನಡೆದಾಡುವುದೇ ಕಷ್ಟಕರವಾಗಿತ್ತು. ನಂತರ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಧ್ವನಿಯೆತ್ತಿದಾಗ ನಮಗೆ ಅನುದಾನ ಬರುವುದಿಲ್ಲ ಎಂದು ಬೈಲೂರು- ಕೌಡೂರು ಗ್ರಾಮ ಪಂಚಾಯತ್ ಅದ್ಯಕ್ಷರು ಹಾಗೂ ಸದಸ್ಯರು ತಿಳಿಸಿದರು.

ಕಾರ್ಕಳ ಕಾಂಗ್ರೆಸ್ ನಾಯಕರಾದ ಮುನಿಯಲು ಉದಯ ಕುಮಾರ್ ಶೆಟ್ಟಿ ರವರು ರಸ್ತೆಯ ಪರಿವೀಕ್ಷಣೆ ಮಾಡಿ ಗ್ರಾಮಸ್ಥರನ್ನು ಸಂಪರ್ಕಿಸಿ, ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಡಾ| ಬಿ. ಆರ್. ಅಂಬೇಡ್ಕರ್ ರಸ್ತೆ ಅಭಿವೃದ್ಧಿ ಯಾಗಿದೆ ಅಲ್ಲದೆ ಇನ್ನೂ 200ಮೀಟರ್ ಅಭಿವೃದ್ಧಿಯಾಗಬೇಕಾಗಿದೆ.

ಈ ರಸ್ತೆಗಾಗಿ ದುಡಿದ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್, ಬೈಲೂರು- ಕೌಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸಂಧ್ಯಾ ಶೆಟ್ಟಿ, ಸಹಕರಿಸಿದ ಗ್ರಾಮಸ್ಥರಿಗೆ, ಗ್ರಾಮೀಣ ಕಾಂಗ್ರೆಸ್ ಮುಖಂಡರಾದ ಅಂತೋನಿ ಮಿರಾಂದಾರವರು ಅಭಿನಂದಿಸಿದ್ದಾರೆ.

 

Related posts

ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸನ್ಮಾನ

Madhyama Bimba

ಕಾರ್ಕಳ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಂಟೇನರ್ ಲಾರಿ ಡಿಕ್ಕಿ-ಗಾಯ

Madhyama Bimba

ಕಾರ್ಕಳ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜನಜಾಗೃತಿ ಜಾಥಾ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More