ಮೂಡುಬಿದಿರೆ

ವರ್ಕು ಶಂಕರ ರಾವ್ ನಿಧನ

ಮೂಡುಬಿದಿರೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಸಮಿತಿ ಮಾಜಿ ಸದಸ್ಯ, ಮಂಜನಬೈಲು ಶ್ರೀ ಭವಾನಿಶಂಕರ ಭಜನಾ ಮಂಡಳಿ ಅಧ್ಯಕ್ಷ, ತೆಂಕಮಿಜಾರು ಗ್ರಾ.ಪಂ. ಮಾಜಿ ಅಧ್ಯಕ್ಷ ವರ್ಕು ಶಂಕರ ರಾವ್ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.


ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಕಲ್ಲಮುಂಡ್ಕೂರು ಮಂಡಲ ಪಂಚಾಯತ್ ಸದಸ್ಯ, ಕಲಾನಿಧಿ ಸಹಕಾರ ಸಂಘದ ನಿರ್ದೇಶಕ, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರ ಸಂಘದ ನಾಮನಿರ್ದೇಶಿತ ಸದಸ್ಯರಾಗಿದ್ದರು.
ಮೃತರಿಗೆ ಮೂವರು ಗಂಡು ಹಾಗೂ ಒಬ್ಬಾಕೆ ಪುತ್ರಿ ಇದ್ದಾರೆ.

ಸಂತಾಪ
ವರ್ಕು ಶಂಕರ ರಾವ್ ನಿಧನಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್, ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ ವಿ.ಎ., ಮಂಜನಬೈಲು ಶ್ರೀ ಭವಾನಿ ಶಂಕರ ಭಜನಾ ಮಂಡಳಿ ಕಾರ್ಯದರ್ಶಿ ಬಾಲಕೃಷ್ಣ ರಾವ್, ಅಶ್ವತ್ಥಪುರ ‌ಕಲಾನಿಧಿ ಸಹಕಾರ ಸಂಘದ ಅಧ್ಯಕ್ಷ ರಘುನಾಥ ಎಲ್.ವಿ. ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Related posts

  ತೊಡಾರಿನಲ್ಲಿ ಮಳೆ ನೀರಿಗೆ ಕೊಚ್ಚಿಕೊಂಡ ರಸ್ತೆ

Madhyama Bimba

ಸಿ.ಎ. ಇಂಟರ್ ಮೀಡಿಯೆಟ್ ಫಲಿತಾಂಶ : ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳ ಉತ್ತಮ ಸಾಧನೆ

Madhyama Bimba

ಬಿಲ್ಲವರು, ಬಂಟರು, ಹಾಗೂ ಮೊಗವೀರರು ಒಂದೇ ತಾಯಿಯ ಮಕ್ಕಳು – ಗುರುನಾರಾಯಣ ಸಂಘದ ಅಮೃತ ಮಹೋತ್ಸವದಲ್ಲಿ ಡಾ. ಮೋಹನ್ ಆಳ್ವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More