Blog

ಕಾರ್ಕಳದಲ್ಲಿ ಹಿಂದೂ ವಿರೋಧಿ ಕೃತ್ಯ – ತಹಸೀಲ್ದಾರ್ ರಿಗೆ ಮನವಿ ಮಾಡಿದ ಸಂಘಟನೆಗಳು

ಕಾರ್ಕಳ ತಾಲೂಕಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಹಿಂದೂ ವಿರೋಧಿ ಕೃತ್ಯಗಳ ಹಾಗೂ  ಹಿಂದೂಗಳ ಭಾವನೆಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಪೋಲಿಸ್ ಇಲಾಖೆ ಕೈಗೊಂಡ ಕಾನೂನು ಕ್ರಮಗಳ ಬಗ್ಗೆ ಸ್ಪಷ್ಟನೆ ಕೋರಿ ಕಾರ್ಕಳ ತಾಲೂಕು ಕಛೇರಿಯಲ್ಲಿ ಹಿಂದೂ ಸಂಘಟನೆ ಮುಖಂಡರು ತಹಶೀಲ್ದಾರರನ್ನು ಭೇಟಿಯಾದರು.

ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ಗೋ ಹತ್ಯೆ, ಅಕ್ರಮ ಗೋ ಸಾಗಾಟ, ಅಕ್ರಮ ಕಸಾಯಿಖಾನೆ ಈ ಎಲ್ಲಾ ಪ್ರಕರಣದಲ್ಲಿ ಆರೋಪಿಗಳು ಎನಿಸಿಕೊಂಡವರ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇರುವುದರಿಂದ ಕಾನೂನಿನ ಭಯವಿಲ್ಲದೆ ಈಗ ಪರಶುರಾಮ ಥೀಮ್ ಪಾರ್ಕ್ ನಲ್ಲಿಯೂ ಕಳ್ಳತನದ ಮೂಲಕ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ. ಈವರೆಗೆ ನಡೆದ ಪ್ರಕರಣದ ಕಾನೂನು ಕ್ರಮದ ಬಗ್ಗೆ ಸ್ಪಷ್ಟನೆ ನೀಡುವಂತೆ ಮಾನ್ಯ ತಹಶೀಲ್ದಾರರಿಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಿಂದೂ ಜಾಗರಣ ವೇದಿಕೆ ನಿಯೋಗ ಭೇಟಿಯಾಗಿ ಪತ್ರದ ಮೂಲಕ ಆಗ್ರಹಿಸಲಾಯಿತು.

Related posts

ಹೆಬ್ರಿಯಲ್ಲಿ ಶಾರದಾ ಪೂಜೆ

Madhyama Bimba

ಎಂ ಡಿ ಅಧಿಕಾರಿ ಪುತ್ತಳಿಗೆ ಮಾಲಾರ್ಪಣೆ

Madhyama Bimba

ಮುನಿಯಾಲು ಕಾಡುಹೊಳೆ: ಸುಧಣ್ಣಾಸ್ ರಿವರ್‌ವ್ಯೂ ಗಾರ್ಡನ್ ಲೋಕರ್ಪಾಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More