ಮುಂಡ್ಕೂರು : ನಾನಿಲ್ತಾರು ಕುಲಾಲ ಸಂಘದ ಸ್ಥಾಪಕರಾದ ದಿವಂಗತ ಸುಂದರ ಮೂಲ್ಯ ಅವರ ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ, ಆಮಂತ್ರಣ ಪತ್ರಿಕೆಯನ್ನು ಅವರ ನಾನಿಲ್ತಾರು ಹೊಸಹಿತ್ಲು ಸ್ವಗೃಹದಲ್ಲಿ ಕುಟುಂಬಸ್ಥರು ಸರಳವಾಗಿ ಬಿಡುಗಡೆಗೊಳಿಸಿದರು.
ನಾನಿಲ್ತಾರು ದಿ. ಸುಂದರ ಮೂಲ್ಯ ಅಭಿಮಾನಿ ಬಳಗದ ಸಂಚಾಲಕರು ಸುಂದರ ಮೂಲ್ಯ ಅವರ ಸುಪುತ್ರರರಾದ ಸುಕುಮಾರ್ ಸಾಲಿಯಾನ್ ಅವರ ಮುಂದಾಳತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಬಂಧು-ಮಿತ್ರರು ಹಾಗೂ ಅಭಿಮಾನಿ ಬಳಗದ ಪ್ರಮುಖರು ಉಪಸ್ಥಿತರಿದ್ದು, ನಾನಿಲ್ತಾರು ದಿ. ಸುಂದರ ಮೂಲ್ಯ ಅವರು ಸಮಾಜ ಸೇವೆಯಲ್ಲಿ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದರು. ಅವರ ಮಾರ್ಗದರ್ಶನ ಮತ್ತು ತ್ಯಾಗ ಮನೋಭಾವದಿಂದ ಕುಲಾಲ ಸಮುದಾಯದಲ್ಲಿ ಸಂಘಟನೆ ಬಲಪಡಿಸಲು ಸಾಧ್ಯವಾಯಿತು ಎಂದು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ನಾನಿಲ್ತಾರು ದಿ.ಸುಂದರ ಮೂಲ್ಯ ಅಭಿಮಾನಿ ಬಳಗದ ವತಿಯಿಂದ ಮೇ 23ನೇ ತಾರೀಕು ಶನಿವಾರದಂದು ಸಾಯಂಕಾಲ 3.30 ರಿಂದ ಭಜನಾ ಕಾರ್ಯಕ್ರಮ ನೃತ್ಯ ವೈಭವ ಮೊದಲಾದ ಕಾರ್ಯಕ್ರಮದೊಂದಿಗೆ ಆರಂಭಗೊಂಡು ಸಂಜೆ 6.30 ರಿಂದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯೊಂದಿಗೆ ಸಭಾ ಕಾರ್ಯಕ್ರಮಗಳು ನಡೆಯಲಿದ್ದು ಈ ಸಂದರ್ಭದಲ್ಲಿ ಅನೇಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲಿನ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಬಲೆಚಾಪರ್ಕ ನಾಟಕ ತಂಡದಿಂದ ದೇವದಾಸ್ ಕಾಫೀಕಾಡ್ ನಿರ್ದೇಶನದ ಎನ್ನನೇ ಕಥೆ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಸಂಸ್ಮರಣ ಕಾರ್ಯಕ್ರಮವನ್ನು ಭಕ್ತಿಪೂರ್ವಕವಾಗಿ ಹಾಗೂ ಗೌರವದೊಂದಿಗೆ ಆಚರಿಸಲು ಎಲ್ಲಾ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದಿ. ಸುಂದರ ಮೂಲ್ಯ ಅವರ ಕುಟುಂಬಿಕರು ವಿನಂತಿಸಿದ್ದಾರೆ.
previous post
