ಕಾರ್ಕಳ

ಕರ್ನಾಟಕದ ವಿಧಾನ ಮಂಡಲ ಸಂಸದೀಯ ಇತಿಹಾಸ ಹಾಗೂ ಸಂಪ್ರದಾಯ ಭಗ್ನ: ಸುನೀಲ್ ಕುಮಾರ್

ಬೆಂಗಳೂರು: ರಾಜ್ಯ ಸರ್ಕಾರ ತನ್ನ ಒಳಜಗಳ ಹಾಗೂ ಹೈಕಮಾಂಡ್ ಮೆಚ್ಚಿಸುವುದಕ್ಕೆ ಕರ್ನಾಟಕದ ವಿಧಾನ ಮಂಡಲ ಸಂಸದೀಯ ಇತಿಹಾಸ ಹಾಗೂ ಸಂಪ್ರದಾಯವನ್ನು ಭಗ್ನಗೊಳಿಸಲು ಹೊರಟಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.

ಸಾಮಾನ್ಯವಾಗಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಬಳಿಕ ಕನಿಷ್ಠ ಹತ್ತು ದಿನಗಳ ಕಾಲ ಕಲಾಪ ನಡೆಸಲಾಗುತ್ತಿತ್ತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಶಾಸಕರು ಕ್ಷೇತ್ರ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದು ಹಾಗೂ ಅದಕ್ಕೆ ಮುಖ್ಯಮಂತ್ರಿಗಳು ಸದನದಲ್ಲೇ ಉತ್ತರ ಕೊಡುವುದು ವಾಡಿಕೆ ಹಾಗೂ ಸದನದ ರೀತಿ. ಆದರೆ ವಿಬಿಜಿರಾಮ್ – ಜಿ ವಿಧೇಯಕದ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯುವ ನೆಪದಲ್ಲಿ ಜಂಟಿ ಅಧಿವೇಶನವನ್ನು ಸೀಮಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಒಳಜಗಳಗಳಿಂದ ಹೈರಾಣಾಗಿರುವ ಅಧಿವೇಶನವನ್ನೂ ನಡೆಸದಷ್ಟು ಹತಾಷ ಹಾಗೂ ದುರ್ಬಲತೆಗೆ ಸರ್ಕಾರ ಸಿಕ್ಕಿದ್ದು ನಾಡಿನ ದುರಂತ. ಅಷ್ಟಕ್ಕೂ ತರಾತುರಿಯಲ್ಲಿ ಜಂಟಿ ಅಧಿವೇಶನ ಕರೆಯುವ ಅನಿವಾರ್ಯತೆ ಏನಿತ್ತು? ಸದನವನ್ನಾದರೂ ವ್ಯವಸ್ಥಿತವಾಗಿ ನಡೆಸುವುದು ನಿಮ್ಮ ಕರ್ತವ್ಯವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ವಿಬಿಜಿ- ರಾಮ್ ಜಿ ವಿಧೇಯಕದ ಬಗ್ಗೆ ಯಾವುದೇ ವೇದಿಕೆಯಲ್ಲಿ ಬೇಕಾದರೂ ಚರ್ಚೆ ನಡೆಸುವುದಕ್ಕೆ ಬಿಜೆಪಿ ಸಿದ್ದ. ಆದರೆ ಈ ಕಾಯ್ದೆ ವಿರುದ್ಧ ತುರ್ತಾಗಿ ನಿರ್ಣಯ ಪಾಸುಮಾಡಿಕೊಂಡು ರಾಜಕೀಯ ಹೋರಾಟ ಮಾಡಬೇಕೆಂಬುದೇ ಸರ್ಕಾರದ ಉದ್ದೇಶವಾಗಿದೆ. ಶಾಸನ ಸಭೆಯ ರೀತಿ- ರಿವಾಜುಗಳು ಕಾಂಗ್ರೆಸ್ ಹೈಕಮಾಂಡ್ ಆಶಯಕ್ಕೆ ತಕ್ಕಂತೆ ನಡೆಸುವುದು ಸರಿ ಅಲ್ಲ. ಅಧಿವೇಶನದ ಅವಧಿಯನ್ನು ವಿಸ್ತರಿಸುವ ಜತೆಗೆ ನಾಡಿನ ಜ್ವಲಂತ ವಿಚಾರಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

Related posts

ಚಿನ್ನದ ರೇಟು ನೋಡುತ್ತೇವೆ. ಕೃಷಿ ರೇಟು ನೋಡುವಂತಾಗಲಿ

Madhyama Bimba

ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಮೊದಲ 10ರ ಸ್ಥಾನದಲ್ಲಿ ಜ್ಞಾನಸುಧಾದ 49 ವಿದ್ಯಾರ್ಥಿಗಳು

Madhyama Bimba

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ: ರೂ.1200 ಕೋಟಿ ವ್ಯವಹಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More