ಮೂಡುಬಿದಿರೆ

 ಜ. 22:ಪಂಚಶಕ್ತಿ ಸಹಕಾರಿ ಸಂಘ ಸ್ವಂತ ಕಟ್ಟಡಕ್ಕೆ

ಮೂಡುಬಿದಿರೆಯಲ್ಲಿ ಹನ್ನೊಂದು ವರ್ಷಗಳ ಹಿಂದೆ ಪ್ರಾರಂಭಗೊಂಡು ಹನ್ನೆರಡನೇ ವರ್ಷಕ್ಕೆ ಮುಂದುವರಿಯುತ್ತಿರುವ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಮೂಡುಬಿದಿರೆ ಪುರಸಭಾ ಕಚೇರಿ ಮುಂಭಾಗದ ಫಾರ್ಚೂನ್ ನೀತಿ ಹೈಟ್ಸ್ ಕಟ್ಟಡದಲ್ಲಿ ಸ್ವಂತ ಕಚೇರಿಗೆ ಸ್ಥಳಾಂತರಗೊಳ್ಳಲಿದೆ ಎಂದು ಸಹಕಾರಿಯ ಅಧ್ಯಕ್ಷ ರಂಜಿತ್ ಪೂಜಾರಿ ತೋಡಾರು ತಿಳಿಸಿದ್ದಾರೆ. ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಜನವರಿ 22, ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.

ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಮೂಡುಬಿದಿರೆ ಜೈನಮಠದ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಮಹಾ ಸ್ವಾಮೀಜಿಯವರು ಆಶೀರ್ವಚನಗೈಯಲಿ ದ್ದು ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಂಜಿತ್‌ ಪೂಜಾರಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಎಂ. ಮೋಹನ ಆಳ್ವ ಉದ್ಯಮಿಗಳಾದ ಕೆ. ಶ್ರೀಪತಿ ಭಟ್, ಶಶಿಧರ ಶೆಟ್ಟಿ ಬರೋಡಾ, ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ಕೆ. ಅಭಯಚಂದ್ರ ಜೈನ್, ಡಾ. ಅಮರಶ್ರೀ ಅಮರನಾಥ ಶೆಟ್ಟಿ ಸೇರಿದಂತೆ ಸಮಾಜದ ಹಲವು ಗಣ್ಯರು ಭಾಗವಹಿಸಲಿದ್ದಾರೆ.

2019_20ಸಾಲಿನಲ್ಲಿ ‘ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಸಹಕಾರಿ’ ಪ್ರಶಸ್ತಿಯನ್ನೂ ಪಡೆದುಕೊಂಡ ಸಂಸ್ಥೆ ಪ್ರಸ್ತುತ 11ಕೋಟಿ ದುಡಿಯುವ ಬಂಡವಾಳದೊಂದಿಗೆ 14.13ಲಕ್ಷ ಸಹಾಯಧನ ನೀಡಿ ಸಾಮಾಜಿಕ ಕಳಕಳಿ ಪ್ರದರ್ಶಿಸಿದೆ ಎಂದರು.

ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರವನ್ನು ನೀಡಲುವಡ್ಡೇಶಿಸಲಾಗಿದೆ. ಹಿರಿಯ ನಾಗರಿಕರು, ದಿವ್ಯಾಂಗರು, ಸೈನಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ 10.00% ಹಾಗೂ ಇತರರಿಗೆ 9.50% ಬಡ್ಡಿ ನೀಡಲಾಗುವುದು. ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣ, ವಾಹನ ಹಾಗೂ ಗೃಹ ಸಾಲ ಸೌಲಭ್ಯಗಳು ಲಭ್ಯವಿವೆ ಎಂದು ರಂಜಿತ್ ಪೂಜಾರಿ ತಿಳಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ರಾಜಶೇಖರ ಮದ್ಯಸ್ಥ ನಿರ್ದೇಶಕರಾದ ಗೋಪಾಲ್ ಶೆಟ್ಟಿಗಾರ್, ರಾಜೇಂದ್ರ ಬಿ., ಸುರೇಶ್‌ ಪೂಜಾರಿ ಎಂ., ರಮೇಶ್ ಎಸ್. ಶೆಟ್ಟಿ ರವೀಂದ್ರ ಕರ್ಕೇರ, ನಾಗೇಶ್ ನಾಯ್ಕ ಗೋಷ್ಠಿಯಲ್ಲಿದ್ದರು.

Related posts

ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟ- ಎರಡೂ ವಿಭಾಗದಲ್ಲೂ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜು ಚಾಂಪಿಯನ್

Madhyama Bimba

ಮೂಡುಬಿದಿರೆ ಯುವತಿ ಗುರುಪುರದಲ್ಲಿ ಆತ್ಮಹತ್ಯೆ

Madhyama Bimba

ಪತ್ರಕರ್ತ ವೇಣುಗೋಪಾಲ್, ಶೇಖರ್ ಅಜೆಕಾರ್ ಸಂಸ್ಮರಣೆ, ಬಹುಭಾಷಾ ಕವಿಗೋಷ್ಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More