ಮೂಡುಬಿದಿರೆ

ಜ 21:ಬೋರುಗುಡ್ಡೆ ಶ್ರೀ ಸತ್ಯನಾರಾಯಣ ದೇವಸ್ಥಾನದ ಗರ್ಭಗೃಹ ಶಿಲಾನ್ಯಾಸ

ಮೂಡುಬಿದಿರೆ ತಾಲೂಕಿನ ಅಳಿಯೂರು ಸಮೀಪದ ಬೋರುಗುಡ್ಡೆ ಶ್ರೀ ಕ್ಷೇತ್ರ ಸತ್ಯಪುರ ಶ್ರೀ ಸತ್ಯನಾರಾಯಣ ದೇವಸ್ಥಾನದ ನೂತನ ಗರ್ಭಗೃಹದ ಶಿಲಾನ್ಯಾಸ ಮತ್ತು ನಿಧಿಕುಂಭ ಸ್ಥಾಪನಾ ಕಾರ್ಯಕ್ರಮವು ಜನವರಿ 21, ಬುಧವಾರದಂದು ಜರುಗಲಿದೆ.

ಅಂದು ಬೆಳಿಗ್ಗೆ 9.25ರಿಂದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಮಾಗಣೆ ತಂತ್ರಿಯವರಾದ ಕೆ. ನರಸಿಂಹ ತಂತ್ರಿಯವರ ಆಶೀರ್ವಾದದೊಂದಿಗೆ, ಮಾಗಣೆ ಅಸ್ರಣ್ಣರಾದ ನಾಗರಾಜ್ ಭಟ್ ರವರ ಮಾರ್ಗದರ್ಶನದಲ್ಲಿ, ಶ್ರೀ ಸತ್ಯನಾರಾಯಣ
ಭಟ್ ರವರ ಮಾರ್ಗದರ್ಶನದಲ್ಲಿ ಶ್ರೀ ಸತ್ಯನಾರಾಯಣ ತಂತ್ರಿಯವರ ಪೌರೋಹಿತ್ಯದಲ್ಲಿ ಹಾಗೂ ವಾಸ್ತುಶಿಲ್ಪಿ ಶ್ರೀ ಪ್ರಮಲ್ ಕುಮಾರ್ ಕಾರ್ಕಳ ಅವರ ಸಹಕಾರದಲ್ಲಿ ಪುಣ್ಯ ಕಾರ್ಯ ನೆರವೇರಲಿದೆ.

ಶಿಲಾನ್ಯಾಸದ ಅಂಗವಾಗಿ ನಡೆಯುವ ಧಾರ್ಮಿಕ ಕೂಟದಲ್ಲಿ ಕಟೀಲು ಕ್ಷೇತ್ರದ ಅನುವಂಶಿಕ ಮೋಕೇಸರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ಪಣಪಿಲ ಅರಮನೆಯ ಬಿ. ವಿಮಲ್ ಕುಮಾ‌ರ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಹಾಗೂ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಉಮಾನಾಥ್ ಎ. ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮುಂಬೈನ ಉದ್ಯಮಿ ಕೆ. ಕೃಷ್ಣರಾಜ ತಂತ್ರಿ, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಡಳಿತ ಮೋಕೇಸರ ದೇವೇಂದ್ರ ಹೆಗ್ಡೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ನಿವೃತ್ತ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಪದ್ಮಕುಮಾ‌ರ್ ಕೊಂಬೆಟ್ಟುಗುತ್ತು, ಮಾಂಟ್ರಾಡಿ, ಉದ್ಯಮಿ ತಿಮ್ಮಯ್ಯ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉದ್ಯಮಿ ಶ್ರೀಪತಿ ಭಟ್, ವಸಂತ್ ಭಟ್, ಸರಸ್ವತಿ ನಾರಾವಿ, ಬಿಜೆಪಿ ಮುಖಂಡ ಸುದರ್ಶನ್ ಮೂಡುಬಿದಿರೆ, ಬಿಜೆಪಿ ಮುಖಂಡರು ಸುರೇಶ್ ಕುಮಾ‌ರ್ ಶೆಟ್ಟಿ ಹೊಸ್ಕಾರು ಸೂರ್ಯಶ್ರೀ, ಡಾ.ಪ್ರಸಾದ್ ಶೆಟ್ಟಿ, ನಾರಾಯಣ ಶೆಟ್ಟಿ ಕೋಂಕೆ, ಡಾ. ಅಮರಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಸತೀಶ್ ವಿ. ಶೆಟ್ಟಿ, ಯೋಗೀಶ್ ಹೆಗ್ಡೆ ವಿನಯ್ ಹೆಗ್ಡೆ, ಬೆಳುವಾಯಿ, ಹೇಮಾ ಕೆ. ಪೂಜಾರಿ ಅಳಿಯೂರು, ಭಾನುಮತಿ ಶೀನಪ್ಪ ರುಕ್ಕಯ್ಯ ಪೂಜಾರಿ, ಅಶೋಕ್‌ ಶೆಟ್ಟಿ ಬೇಲೊಟ್ಟು ಅಧ್ಯಕ್ಷರು, ಗ್ರಾಮ ಪಂಚಾಯತ್‌ ದರೆಗುಡ್ಡೆ ಉದಯ ಪೂಜಾರಿ ಮುಖ್ಯ ಅತಿಥಿ ಗಳಾಗಿರುವರು.

ಪುಣ್ಯಕಾರ್ಯದಲ್ಲಿ ಭಗವದ್ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಜಿ ಎಲ್ ಆಚಾರ್ಯ ಜ್ಯವೆಲ್ಲರ್ಸ್ ವಿಸಿಟ್ & ವಿನ್ ಸ್ಪರ್ಧೆಯ ಫಲಿತಾಂಶ

Madhyama Bimba

ಮೆಸ್ಕಾಂ ಗ್ರಾಹಕ ಸಲಹಾ ಸಮಿತಿಗೆ ಶಾಸಕ ಕೋಟ್ಯಾನ್ ಅಧ್ಯಕ್ಷ

Madhyama Bimba

ಬಾವಿಗೆ ಬಿದ್ದ ಮಹಿಳೆ – ಆತ್ಮಹತ್ಯೆಗೆ ಶರಣಾದ ಚಾಲಕ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More