ಕಾರ್ಕಳಹೆಬ್ರಿ

ಅಜೆಕಾರು: ತಾಯಿ ಮಗಳು ಮೃತ್ಯು

ಅಜೆಕಾರು: ಮಹಿಳೆಯೋರ್ವರು ತನ್ನ ಮಗಳಿಗಿರುವ ಅನಾರೋಗ್ಯದ ಚಿಂತೆಯಿಂದ ಮನ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹಾಗೂ ಮಗಳು ಅನಾರೋಗ್ಯದಿಂದ ಮೃತಪಟ್ಟ ಘಟನೆ ಜ. 18ರಂದು ವರದಿಯಾಗಿದೆ.


ಅಜೆಕಾರು ಮರ್ಣೆ ಗ್ರಾಮದ ಕುರುಂಬಿಲು (63) ಹಾಗೂ ಅವರ ಮಗಳು ವಸಂತಿ (30) ಮೃತ್ಯುವಿಗೀಡಾದವರು.

ಕುರುಂಬಿಲು ರವರ ಮಗಳು ವಸಂತಿ ಸುಮಾರು 6 ತಿಂಗಳಿನಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇತ್ತೀಚಿಗೆ ವಸಂತಿರವರ ಆರೋಗ್ಯ ಹದಗೆಟ್ಟಿದ್ದು ಕಳೆದ 1 ವಾರದಿಂದ ಹಾಸಿಗೆಯಲ್ಲಿದ್ದರು. ಈ ಬಗ್ಗೆ ಚಿಂತೆಯಿಂದ ಕುರುಂಬಿಲರವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ವಸಂತಿರವರು ಕೂಡ ಕ್ಯಾನ್ಸರ್ ಖಾಯಿಲೆಯು ಉಲ್ಬಣಗೊಂಡು ಮೃತಪಟ್ಟಿರುತ್ತಾರೆ.

ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ರೋಟರಿಯಿಂದ ಹೊಸ ವರ್ಷಾಚರಣೆ ಮತ್ತು ವಿವಿಧ ವೃತ್ತಿ ಸಾಧಕರಿಗೆ ಸನ್ಮಾನ

Madhyama Bimba

ಕಾರ್ಕಳ: ರಾಜಮಾತೆ ಜೀಜಾಬಾಯಿ ಜನ್ಮದಿನಾಚರಣೆ

Madhyama Bimba

ನೀರ್ಕೆರೆ ಸೇತುವೆ ಕಾಮಗಾರಿಗೆ ರಸ್ತೆ ಬದಲಾವಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More