ಕಾರ್ಕಳ

ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ: ವಾರ್ಷಿಕ ಮಹಾರಥೋತ್ಸವ

ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ ಇಲ್ಲಿಯ ವಾರ್ಷಿಕ ಮಹಾರಥೋತ್ಸವವು ಜ. 25 ರಥಸಪ್ತಮಿಯಂದು ಧ್ವಜಾರೋಹಣ ಗೊಂಡು ಜ. 29 ಪರ್ಯಂತ ನಡೆಯಲಿದೆ.


ಉಡುಪಿ ಪುತ್ತೂರು ಶ್ರೀ ಹಯವದನ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಶ್ರೀ ಮಹಾ ರಥೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಜ.25ರಂದು ಬೆಳಿಗ್ಗೆ 10.00ಕ್ಕೆ ಪ್ರಾರ್ಥನೆ, ತೋರಣ ಮುಹೂರ್ತ, ಗಣಯಾಗ, ಗಂಟೆ 11.30ಕ್ಕೆ ಧ್ವಜಾರೋಹಣ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6.00 ರಿಂದ 7.00 ರವರೆಗೆ ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ, ಕುಕ್ಕುಂದೂರು ಹಾಗೂ ಓಂಕಾರ್ ಭಜನಾ ಮಂಡಳಿ, ಕಾಬೆಟ್ಟು, ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ7.30ಕ್ಕೆ ಉತ್ಸವ ಬಲಿ, ರಾತ್ರಿ ಪೂಜೆ ನಡೆಯಲಿದೆ. ರಾತ್ರಿ 9.30ಕ್ಕೆ ಮಹಾರಂಗಪೂಜೆ, ಭೂತ ಬಲಿ ಕಾರ್ಯಕ್ರಮ ನೆರವೇರಲಿದೆ.


ಜ. 26ರಂದು ಬೆಳಿಗ್ಗೆ 9.00ಕ್ಕೆ ನವಕ ಕಲಶ, ರುದ್ರಾಭಿಷೇಕ, ನಾಗಬನ ದಲ್ಲಿ ಆಶ್ಲೇಷಾ ಬಲಿ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ 6 ರಿಂದ 7ರವರೆಗೆ ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ 7.30ಕ್ಕೆ ಉತ್ಸವ ಬಲಿ, ರಾತ್ರಿ ಪೂಜೆ ನೆರವೇರಲಿದೆ.

ಜ. 27ರಂದು ಮಧ್ಯಾಹ್ನ 11.00ಕ್ಕೆ ನವಕ ಕಲಶ, ರುದ್ರಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಶ್ರೀ ದೇವರ ರಥಾರೋಹಣ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00 ರಿಂದ 7.00 ರವರೆಗೆ ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ ಅನಂತ ಶಯನ ಇವರಿಂದ ಭಜನಾ ಕಾರ್ಯ ಕ್ರಮ, ರಾತ್ರಿ 7.30ಕ್ಕೆ ಶ್ರೀ ಮಹಾ ರಥೋತ್ಸವ, ರಾತ್ರಿ ಪೂಜೆ, ಪರಿವಾರ ದೈವಗಳ ತಂಬಿಲ, ಭೂತ ಬಲಿ, ಕವಾಟ ಬಂಧನ ನಡೆಯಲಿದೆ.

ಜ. 28ರಂದು ಬೆಳಿಗ್ಗೆ 9.00ಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ರಿಂದ 7.00ರವರೆಗೆ ಸ್ಥಳೀಯರಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.30ಕ್ಕೆ ಉತ್ಸವ ಬಲಿ, ದೈವಗಳ ನೇಮ, ಅವಭೃತ ಕಟ್ಟೆಪೂಜೆ, ಧ್ವಜಾವ ರೋಹಣ, ಮಂತ್ರಾಕ್ಷತೆ ನೆರವೇರಲಿದೆ.

ಜ.29ರಂದು ಬೆಳಿಗ್ಗೆ ಪಂಚವಿಂಶತಿ ಕಲಾಭಿಷೇಕ, ಪ್ರಧಾನ ಹೋಮ, ಸಂಪ್ರೋಕ್ಷಣೆ ನಡೆಯಲಿದೆ. ಎಂದು ದೇವಸ್ಥಾನದ ಆಡಳ್ತೆ ಮೊಕ್ತೇಸರರಾದ ನಕ್ರೆ ವರ್ಣಬೆಟ್ಟು ಮುತ್ತಯ್ಯ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಆಡಳಿತ ನ್ಯಾಯಾಧೀಕರಣ ತರಬೇತಿ: ಅರ್ಜಿ ಆಹ್ವಾನ

Madhyama Bimba

ಸೇಂಟ್ ಲಾರೆನ್ಸ್ ಬಸಿಲಿಕಾ ಅತ್ತೂರು : ಕ್ರಿಸ್‌ಮಸ್ ಪವಿತ್ರ ಬಲಿ ಪೂಜೆ

Madhyama Bimba

ಹೆಬ್ರಿ: ಚೈತನ್ಯ ಯುವ ವೃಂದ ವತಿಯಿಂದ ಕ್ರಿಕೆಟ್ ಪಂದ್ಯಾಟ ಚೈತನ್ಯ ಟ್ರೋಫಿ-2026

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More