ಕಾರ್ಕಳ

ಶ್ರೀ ಮಹಾಮ್ಮಾಯೀ ದೇವಸ್ಥಾನ ಹಂಚಿಕಟ್ಟೆ ಪ್ರತಿಷ್ಠಾ ವರ್ಧಂತ್ಯುತ್ಸವ, ಭಜನಾ ಮಂಗಲೋತ್ಸವ

ಶ್ರೀ ಮಹಾಮ್ಮಾಯೀ ದೇವಸ್ಥಾನ, ಹಂಚಿಕಟ್ಟೆ ಎಣ್ಣೆಹೊಳೆ ಇಲ್ಲಿ ಜ. 26ರಿಂದ 28ರವರೆಗೆ ಭಜನಾ ಮಂಗಲೋತ್ಸವ ಹಾಗೂ ಪ್ರತಿಷ್ಠಾ ವರ್ಧಂತ್ಯುತ್ಸವವು ನಡೆಯಲಿದೆ.


ವೇ|ಮೂ| ಪ್ರಸಾದ್ ತಂತ್ರಿಗಳ ಪ್ರಧಾನ ಆಚಾರ್‍ಯತ್ವದಲ್ಲಿ ಹಾಗೂ ಅರ್ಚಕರಾದ ಅರುಣ್ ಭಟ್‌ರವರ ಸಹಯೋಗದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಜ. 26ರಂದು ಪೂರ್ವಾಹ್ನ9.30ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗಣಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಬೆಳಿಗ್ಗೆ 10.00ರಿಂದ ಸ್ಥಳೀಯರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.00ರಿಂದ ರಾತ್ರಿ 12.00ರವರೆಗೆ ಭಜನಾ ಮಂಗಲೋತ್ಸವ ನಡೆಯಲಿದೆ.

ಜ. 27ರಂದು ಬೆಳಿಗ್ಗೆ 10.00ರಿಂದ ದುರ್ಗಾಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂ. 5.30ರಿಂದ ಅಂಗನವಾಡಿ, ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯರಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ. ಸಾಯಂಕಾಲ 6.30ರಿಂದ ಹೂವಿನ ಪೂಜೆ ಹಾಗೂ ಅನ್ನಸಂತರ್ಪಣೆ, ಸಾಯಂ 7.00ರಿಂದ ಥಂಡರ್ ಗ್ರೈಸ್ ಫೌಂಡೇಶನ್ (ರಿ.) ಬಜಪೆ ಇವರಿಂದ ನೃತ್ಯಸಂಗಮ ನೃತ್ಯದಲ್ಲಿ ವೈವಿಧ್ಯತೆ, ರಾತ್ರಿ . 9.00ರಿಂದ ಶ್ರೀ ಕೋದಂಡರಾಮ ಪ್ರಸಾದಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ವರ್ಣಪಲ್ಲಟ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.


ಜ. 28 ರಂದು ಬೆಳಿಗ್ಗೆ9.30ರಿಂದ ನವಕಪ್ರಧಾನ, ಕಲಶಾಭಿಷೇಕ, ಬೆಳಿಗ್ಗೆ 10.00ರಿಂದ ಆಶ್ಲೇಷಾ ಬಲಿ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 12.00ರಿಂದ ಶ್ರೀ ಮಹಾಮ್ಮಾಯಿ ಯಕ್ಷಗಾನ ಕಲಾ ಮಂಡಳಿ ಶ್ರೀ ಕ್ಷೇತ್ರ ಹಂಚಿಕಟ್ಟೆ ಎಣ್ಣೆಹೊಳೆ ಇವರಿಂದ ಯಕ್ಷಗಾನ ನರಕಾಸುರ ಮೋಕ್ಷ, ಸಾಯಂ, 6.00ರಿಂದ ಭಜನೆ, ಮಹಾಪೂಜೆ, ಸಾಯಂ.7.30 ರಿಂದ ಗೋಂದ್ಲು ಸೇವೆ, ದೇವಿದರ್ಶನ, ಮಾರಿ, ರಾತ್ರಿ 10.00ರಿಂದ ತುಳು ನಾಟಕ ಛತ್ರಪತಿ ಶಿವಾಜಿ ಪ್ರದರ್ಶನಗೊಳ್ಳಲಿದೆ.

Related posts

ಕಾರ್ಕಳ ಜೋಡುರಸ್ತೆಯಲ್ಲಿ ಮಾನಸ ಕಂಫರ್ಟ್ಸ್ ಬೋರ್ಡಿಂಗ್ & ಲಾಡ್ಡಿಂಗ್ ಶುಭಾರಂಭ

Madhyama Bimba

ಕಡ್ತಲದಲ್ಲಿ ರಸ್ತೆ ಬದಿ ಮೃತ್ಯು

Madhyama Bimba

ಜೆಇಇ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ನಾಗಾದೇವ್ ಎಂ.ಜಿ. ಬಿ ಪ್ಲಾನಿಂಗ್ ನಲ್ಲಿ ಜನರಲ್ ಇಡಬ್ಲ್ಯೂಎಸ್ ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More