ಕಾರ್ಕಳಹೆಬ್ರಿ

ಪಡುಕುಡೂರು ಡೈರಿ ಅಧ್ಯಕ್ಷರಾಗಿ ಜಗದೀಶ ಹೆಗ್ಡೆ

ಹೆಬ್ರಿ : ಪಡುಕುಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ೩ನೇ ಅವಧಿಗೆ ಜಗದೀಶ ಹೆಗ್ಡೆ ಪಟೇಲರ ಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಸಹಕಾರಿ ದುರೀಣ ಜಗದೀಶ ಹೆಗ್ಡೆ ಪಡುಕುಡೂರು ಡೈರಿಯ ಸ್ಥಾಪನೆಯ ರೂವಾರಿಯಾಗಿದ್ದಾರೆ. ಕಾರ್ಕಳದ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಮಿತ್ರ ಕುಮಾರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಡೈರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾರದಾ ಚಂದ್ರ ಶೆಟ್ಟಿ ಸಹಕರಿಸಿದರು.


ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಕಾರ್ಕಳ ತಾಲ್ಲೂಕು ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿಯೂ ಜಗದೀಶ ಹೆಗ್ಡೆ ಸೇವೆ ಸಲ್ಲಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಅಶೋಕ ಎಂ.ಶೆಟ್ಟಿ, ನಿರ್ದೇಶಕರಾಗಿ ಹೃದಯ ಕುಮಾರ್ ಶೆಟ್ಟಿ, ಸುಕೇಶ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸಂತೋಷ ಶೆಟ್ಟಿ, ದಿವಾಕರ ಶೆಟ್ಟಿ, ಪ್ರಕಾಶ ಶೆಟ್ಟಿಗಾರ್, ಸುರೇಶ ಪೂಜಾರಿ, ಸುಮತಿ ಶೆಟ್ಟಿ, ಸುಜಾತ ಶೆಟ್ಟಿ ಆಯ್ಕೆಯಾಗಿದ್ದಾರೆ.

Related posts

ರಾಜಾಪುರ ಸಾರಸ್ವತ ಸೊಸೈಟಿ ಲಿ.: ನವೀಕೃತ ಹವಾನಿಯಂತ್ರಿತ ಬೆಳ್ಮಣ್ ಶಾಖೆ ಉದ್ಘಾಟನೆ

Madhyama Bimba

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ – ಆರೋಪಿಯನ್ನು ಸಮರ್ಥಿಸುತ್ತಿರುವ ಬಿಜೆಪಿ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

Madhyama Bimba

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಜೋಡುರಸ್ತೆ : ಸಹಕಾರ ಸಿಂಧೂರ ಲೋಕಾರ್ಪಣೆ ಮತ್ತು ಸೊಸೈಟಿಯ ತ್ರಿಂಶತಿ ಸಂಭ್ರಮ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More