ಹೆಬ್ರಿ

ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ – ಸಕಲ ಸಿದ್ಧತೆ

ಹೆಬ್ರಿ : ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿ ಸೂರಿಮಣ್ಣು ಇದರ ವತಿಯಿಂದ ಇದೇ ಜನವರಿ 28ರಿಂದ ಫೆಬ್ರವರಿ 06ರ ತನಕ ಭಜನಾ ಸುವರ್ಣ ಸಂಭ್ರಮ ಹಾಗೂ ಋಕ್ ಸಂಹಿತಾಯಾಗ ನಡೆಯಲಿದೆ.

ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ ನೇತ್ರತ್ವದ ಸಮಿತಿಯು ಸುವರ್ಣ ಸಂಭ್ರಮದ ಯಶಸ್ವಿಗೆ ಸಕಲ ಸಿದ್ಧತೆ ನಡೆಸಿದೆ. ವಿವಿಧ ಉಪಸಮಿತಿಯ ಸದಸ್ಯರು, ಸ್ವಯಂ ಸೇವಕರು, ಸ್ಥಳೀಯ ಭಕ್ತ ಸಮೂಹ, ಭಜನಾ ಮಂಡಳಿಯ ಸದಸ್ಯರು ಸುವರ್ಣ ಸಂಭ್ರಮದ ಯಶಸ್ಸಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಭಜನಾ ಸುವರ್ಣ ಸಂಭ್ರಮದ ರೂವಾರಿ ಸೂರಿಮಣ್ಣು ಸದಾಶಿವ ಉಪಾಧ್ಯಾಯ ತಿಳಿಸಿದರು.


ಬುಧವಾರ ವಿಶೇಷ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಶ್ರೀದೆವರಿಗೆ ಪ್ರಧಾನ ಹೋಮ, ಕಲಾಶಾಭಿಷೇಕ, ನಾಗದೇವರು ಮತ್ತು ಚಾಮುಂಡಿಗೆ ನವಕ ಪ್ರಧಾನ ಮತ್ತು ಕಲಾಶಾಭಿಷೇಕ, ನೂತನ ಭಜನಾ ಮಂದಿರದಲ್ಲಿ ವಾಸ್ತು ರಾಕ್ಷೋಘ್ನ ಹೋಮ, ಸುದರ್ಶನ ಹೋಮ, ಋಕ್ ಸಂಹಿತಾಯಾಗದ ಅರಣೀಮಥನ, ಅಗ್ನಿಜನನ ಬಳಿಕ ಅನ್ನಸಂತರ್ಪಣೆ ನಡೆಯಿತು. ಗುರುವಾರ ಪೂರ್ವ ಏಕಾದಶಿಯ ಧಾರ್ಮಿಕ ಆಚರಣೆಗಳು ನಡೆಯಿತು.

ಜನವರಿ 30 : ಭಜನಾ ಸುವರ್ಣ ಮಹೋತ್ಸವಕ್ಕೆ ಚಾಲನೆ
ಶುಕ್ರವಾರ ಮುಂಜಾನೆ ಭಜನೆಗೆ ಫಲನ್ಯಾಸ ನಡೆದು ಬಳಿಕ ಭಜನಾ ದೀಪ ಪ್ರಜ್ವಲನೆ ನಡೆದು ಭಜನಾ ಸುವರ್ಣ ಸಂಭ್ರಮದ ಪ್ರಾರಂಭ ನಡೆಯಲಿದೆ. ಮುಖಂಡರಾದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಭಜನಾ ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡುವರು. ರಾಜ್ಯದ ವಿವಿಧ ಭಜನಾ ಮಂಡಳಿಗಳಿಂದ ನಿತ್ಯವೂ ಭಜನೆ ನಡೆಯಲಿದೆ. ಶುಕ್ರವಾರ ಋಕ್ ಸಂಹಿತಾಯಾಗ ಕೂಡ ಆರಂಭಗೊಂಡು ಫೆಬ್ರವರಿ 6ರ ತನಕ ನಡೆಯಲಿದೆ.

ಫೆಬ್ರವರಿ 06 ರಂದು : ಋಕ್ ಸಂಹಿತಾಯಾಗ ಪೂರ್ಣಾಹುತಿ : ಭಜನಾ ಮಂಗಲೋತ್ಸವ. ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮದ ಮಂಗಲೋತ್ಸವ ಮತ್ತು ಋಕ್ ಸಂಹಿತಾಯಾಗದ ಪೂರ್ಣಹುತಿ ಫೆಬ್ರವರಿ 06ರಂದು ಶುಕ್ರವಾರ ನಡೆಯಲಿದೆ. ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 3 ಗಂಟೆಗೆ ಧಾರ್ಮಿಕ ಸಭೆ ಹಾಗೂ ಗೌರವ ಸಮರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ನಡೆಯಲಿದೆ. ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ ಅಧ್ಯಕ್ಷತೆಯಲ್ಲಿ ಸುವರ್ಣ ಸಂಭ್ರಮ ಸಭೆ ನಡೆಯಲಿದೆ. ಕಾಣಿಯೂರು ಮಠಾದೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಶ್ರೀಕಾಂತ್ ಶೆಟ್ಟಿ ಕಾರ್ಕಳ ವಿಶೇಷ ಉಪನ್ಯಾಸ ನೀಡುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ಕುಮಾರ್ ಕಾರ್ಕಳ, ಮಾಜಿ ಸಂಸದ ಪ್ರತಾಪಸಿಂಹ ಮೈಸೂರು, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಸಹಿತ ವಿವಿಧ ಗಣ್ಯರು, ಪ್ರಮುಖರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠದ ಮುಖ್ಯಸ್ಥರಾದ ಭಜನಾ ಸುವರ್ಣ ಸಂಭ್ರಮದ ರೂವಾರಿ ಸೂರಿಮಣ್ಣು ಸದಾಶಿವ ಉಪಾಧ್ಯಾಯ ತಿಳಿಸಿದ್ದಾರೆ. ಸರ್ವರೂ ಸೇರಿ ಭಜನಾ ಸುವರ್ಣ ಸಂಭ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.

 

Related posts

ಕಾರ್ಕಳ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಂಟೇನರ್ ಲಾರಿ ಡಿಕ್ಕಿ-ಗಾಯ

Madhyama Bimba

ಹೆಬ್ರಿಯಲ್ಲಿ ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು

Madhyama Bimba

ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ವತಿಯಿಂದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More